ಮೈಸೂರು: ಶಾಸಕರಿಗೆ ಸಮಸ್ಯೆ ಹೇಳಲು ಬಂದ ವ್ಯಕ್ತಿಯನ್ನ ಎಳೆದುಕೊಂಡು ಅಟ್ಟಾಡಿಸಿ ಹಲ್ಲೆ ಮಾಡಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ. ಇಂದು ನಂಜನಗೂಡಿನ ಬಿಜೆಪಿ ಶಾಸಕ ಹರ್ಷವರ್ಧನ್ ನಂಜನಗೂಡು ಪಟ್ಟಣದ ಬಾಲಕಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸಮಸ್ಯೆಗಳನ್ನು ಕೇಳಲು ಆಮಿಸಿದಾಗ, ಅಲ್ಲಿಗೆ ಆಗಮಿಸಿದ ಸ್ಥಳೀಯ ಮುಖಂಡ ಪುಟ್ಟಸ್ವಾಮಿ ಎಂಬುವವರು ಶಾಸಕರಿಗೆ ಅಲ್ಲಿನ ಸಮಸ್ಯೆ ತಿಳಿಸಲು ಮುಂದಾಗಿದ್ದಾರೆ. ಇದನ್ನು ನೋಡಿದ ನಗರಸಭಾ ಸದಸ್ಯ ಕಪಿಲೇಶ್ ಹಾಗೂ ಆತನ ಬೆಂಬಗರು ಪುಟ್ಟಸ್ವಾಮಿ ಹಿಡಿದು ಎಳೆದಾಡಿ, ಕಾಲೇಜಿನ ಆವರಣದಲ್ಲೇ ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ: ರಾಜ್ಯದ ಜನತೆಯ ಭಾವನೆ ಹೇಗಿದೆ ಅನ್ನೋದಕ್ಕೆ ಇಂದಿನ ಫಲಿತಾಂಶವೇ ಸಾಕ್ಷಿ: ಡಿಕೆಶಿ
ಘಟನೆ ನಡೆಯುತ್ತಿದ್ದಂತೆ ಶಾಸಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಕಾಲೇಜಿನ ಆವರಣದಲ್ಲಿ ಈ ಘಟನೆ ನಡೆದಿದ್ದರಿಂದ ವಿದ್ಯಾರ್ಥಿಗಳು ಬೆಚ್ಚಿಬಿದ್ದಿದ್ದಾರೆ. ಹಲ್ಲೆಗೊಳಗಾದ ಪುಟ್ಟಸ್ವಾಮಿ ಸಹ ಕಾರನ್ನೇರಿ ಹೊರಟುಹೋಗಿದ್ದು. ಅ ಹಲ್ಲೆಗೆ ಯಾಕಾಗಿ ಆಯಿತು ಎಂಬ ಬಗ್ಗೆ ನಿಖರ ಕಾರಣ ತಿಳಿದಿಲ್ಲ. ಹಲ್ಲೆ ಮಾಡಿದ ಕಪಿಲೇಶ್ ನಂಜನಗೂಡಿನ ಬಿಜೆಪಿಯ ನಗರಸಭಾ ಸದಸ್ಯನಾಗಿದ್ದಾನೆ.