ETV Bharat / state

ಗಂಡು ಮಗುವಿಗೆ ಜನ್ಮ ನೀಡಿಲ್ಲವೆಂದು ಪತ್ನಿ ಮೇಲೆ ಹಲ್ಲೆಗೈದ ಪತಿ ಅರೆಸ್ಟ್‌ - ಈಟಿವಿ ಭಾರತ ಕನ್ನಡ

ಗಂಡು ಮಗುವಿಗೆ ಜನ್ಮ ನೀಡಿಲ್ಲ ಎಂದು ಪತಿ ಮತ್ತು ಆತನ ಕುಟುಂಬಸ್ಥರು ಪತ್ನಿಯ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿತ್ತು.

ಪತ್ನಿಯ ಮೇಲೆ ಪತಿಯಿಂದ ಹಲ್ಲೆ
ಪತ್ನಿಯ ಮೇಲೆ ಪತಿಯಿಂದ ಹಲ್ಲೆ
author img

By

Published : Mar 27, 2023, 2:28 PM IST

Updated : Mar 27, 2023, 10:50 PM IST

ಮೈಸೂರು: ಗಂಡು ಮಗುವಿಗೆ ಜನ್ಮ ನೀಡಿಲ್ಲ ಎಂಬ ಕಾರಣಕ್ಕೆ ಪತ್ನಿಯ ಮೇಲೆ ಪತಿ ಹಾಗೂ ಕುಟುಂಬಸ್ಥರು ಅಮಾನುಷ ಹಲ್ಲೆ ನಡೆಸಿರುವ ಘಟನೆ ಹೆಚ್​.ಡಿ.ಕೋಟೆ ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ನಡೆದಿತ್ತು. ಇದೀಗ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಂದ್ರು ಬಂಧಿತ. ಶಿವಮ್ಮ ಹಲ್ಲೆಗೊಳಗಾದವರು. ಹೆಚ್ ಡಿ.ಕೋಟೆ ಪೊಲೀಸ್ ಠಾಣೆಗೆ ಶಿವಮ್ಮ ಅವರ ತಾಯಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಶಿವಮ್ಮ ಮತ್ತು ಚಂದ್ರು ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಇದರಿಂದ ಅಸಮಾಧಾನಗೊಂಡ ಚಂದ್ರು, ಗಂಡು ಮಗುವಿಗೆ ಜನ್ಮ ನೀಡಲಿಲ್ಲ ಎಂದು ಮಹಿಳೆಗೆ ಚಿತ್ರಹಿಂಸೆ ನೀಡಿದ್ದಾನೆ. ಚಂದ್ರು ತಂದೆ ರಾಮೇಗೌಡ ಮತ್ತು ತಾಯಿ ಕೆಂಪಮ್ಮ ಕೂಡ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ.

ಗಂಡು ಮಗುವಿಗಾಗಿ, ಶಿವಮ್ಮನಿಗೆ ಚಿತ್ರಹಿಂಸೆ ನೀಡುವುದನ್ನು ನಿಲ್ಲಿಸುವಂತೆ ಚಂದ್ರು ಹಾಗೂ ಆಕೆಯ ಪೋಷಕರಿಗೆ ಶಿವಮ್ಮನ ಕುಟುಂಬದ ಹಿರಿಯರು ಹಲವು ಬಾರಿ ತಿಳಿಹೇಳಿದ್ದಾರೆ. ಇದ್ಯಾವುದಕ್ಕೂ ಕಿವಿಗೊಡದ ಚಂದ್ರು, ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಚಂದ್ರುವಿನ ಬಂಧನದ ನಂತರ ಆತನ ತಂದೆ, ತಾಯಿ ನಾಪತ್ತೆಯಾಗಿದ್ದು ಈ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಶಿವಮ್ಮ ಎಂಬುವವರು ಗಂಡು ಮಗುವಿಗೆ ಜನ್ಮ ನೀಡದ ಹಿನ್ನೆಲೆ ಕುಪಿತಗೊಂಡ ಮಾವ ಮತ್ತು ಅತ್ತೆ ಆಗಾಗ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಲ್ಲೆ ನಡೆಸಿದ್ದರು. ಈ ವಿಷಯದ ಬಗ್ಗೆ ಹಲವು ಬಾರಿ ನ್ಯಾಯ ಪಂಚಾಯತಿಯನ್ನು ಸಹ ನಡೆಸಿದ್ದು, ಗ್ರಾಮಸ್ಥರು ಸಮಾಧಾನ ಪಡಿಸಿದ್ದರು. ಆದರೂ ಅವರ ಕಿರುಕುಳ ಕಡಿಮೆ ಆಗಿರಲಿಲ್ಲ, ಗಂಡನಾದ ಎಸ್ ಆರ್. ಚಂದ್ರು ಶಿವಮ್ಮಳನ್ನು ಕೊಲೆ ಮಾಡಿ, ಬೇರೆಯವರನ್ನು ವಿವಾಹವಾಗುವುದಾಗಿ ಎಚ್ಚರಿಕೆ ನೀಡಿದ್ದ ಎಂದು ಪೋಷಕರು ದೂರಿದ್ದಾರೆ.

ನಂತರ ಮಾರ್ಚ್ 25 ರಂದು ಗಂಡ ಎಸ್ ಆರ್.ಚಂದ್ರು ಮತ್ತು ಅತ್ತೆ, ಮಾವ ರಾಮೇಗೌಡ ಸೇರಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಶಿವಮ್ಮ ಅವರನ್ನು ಪ್ರಥಮ ಚಿಕಿತ್ಸೆಗಾಗಿ ಹೆಚ್ ಡಿ.ಕೋಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅತ್ತೆಯ ಮನೆಯವರ ಕಿರುಕುಳ ತಾಳಲಾರದೆ ಕಳೆದ ವರ್ಷ ಕೂಡ ಹೆಚ್ ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಇದನ್ನೂ ಓದಿ: ಕೋರ್ಟ್ ಆವರಣದಲ್ಲೇ ಪತ್ನಿ ಮೇಲೆ ಆ್ಯಸಿಡ್ ದಾಳಿ ಮಾಡಿದ ಪತಿ..!

ಬೆಂಗಳೂರಿನಲ್ಲಿ ಕೆಲವು ದಿನಗಳ ಹಿಂದೆ ನಡೆದ ಪ್ರಕರಣವೊಂದರಲ್ಲಿ ಕಂಠಪೂರ್ತಿ ಕುಡಿದು ಪತಿ ತನ್ನ ಪತ್ನಿಯ ಹತ್ಯೆಗೆ ಯತ್ನಿಸಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ. ಆರೋಪಿ ವಿರುದ್ಧ ಆರ್​.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆರೋಪಿ ಹರ್ಷ ತನ್ನ ಹೆಂಡತಿ ಸುಧಾರಾಣಿ ತಲೆಯನ್ನು ಗೋಡೆಗೆ ಗುದ್ದಿಸಿ ಬಳಿಕ ತಾನೂ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಇನ್ನು ತುಮಕೂರು ಮೂಲದ ಹರ್ಷ ಮತ್ತು ಆತನ ಪತ್ನಿ ಇಬ್ಬರು ಸಾಫ್ಟ್‌ವೇರ್ ಉದ್ಯೋಗಿಗಳಾಗಿದ್ದರು.

ದಂಪತಿಗೆ 12 ವರ್ಷದ ಮಗನಿದ್ದು, ತಮ್ಮ ಜಮೀನು ಮಾರಿದ ಹಣ ಕೈ ಸೇರಿದ ಬಳಿಕ ಬದಲಾಗಿದ್ದ ಹರ್ಷ ಲಕ್ಷಾಂತರ ರೂಪಾಯಿ ಸಂಬಳ ಬರುವ ಕೆಲಸ ಬಿಟ್ಟು ಕುಡಿತದ ದಾಸನಾಗಿದ್ದ. ಕಳೆದ ಐದಾರು ತಿಂಗಳಿಂದ ಕೆಲಸಕ್ಕೆ ಹೋಗದೆ ಕಂಠಪೂರ್ತಿ ಕುಡಿದು ಮನೆಯಲ್ಲಿಯೇ ಇರುತ್ತಿದ್ದು, ಹೆಂಡತಿ‌ ಜತೆ‌ ಜಗಳ ಮಾಡುತ್ತಿದ್ದನಂತೆ. ಇದರಿಂದ ಬೇಸತ್ತ ಪತ್ನಿ ಸುಧಾರಾಣಿ, 'ಕುಡಿತ ಬಿಟ್ಟು ಕೆಲಸಕ್ಕೆ ಹೋಗಿ' ಎಂದು ಬುದ್ಧಿವಾದ ಹೇಳಿದ್ದಾರಂತೆ. ಮತ್ತೇ ಇಬ್ಬರ ನಡುವೆ ಗಲಾಟೆ ಆರಂಭವಾಗಿ ಜಗಳ ವಿಕೋಪಕ್ಕೆ ತಿರುಗಿ ಹರ್ಷ ತನ್ನ ಹೆಂಡತಿಯನ್ನು ಗೋಡೆಗೆ ಗುದ್ದಿ ಕೊಲೆಗೆ ಯತ್ನಿಸಿದ್ದ. ಬಳಿಕ ತಾನೂ ಚಾಕುವಿನಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ.

ಇದನ್ನೂ ಓದಿ: ಮೊಬೈಲ್​ನಲ್ಲೇ ತಲಾಖ್​ ನೀಡಿದ ಪತಿ.. ನ್ಯಾಯಕ್ಕಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿದ ಪತ್ನಿ

ಇದನ್ನೂ ಓದಿ: ಬೆಂಗಳೂರು: ಪತ್ನಿ ಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ ಪತಿ

Last Updated : Mar 27, 2023, 10:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.