ETV Bharat / state

ಸಚಿವ ಸಿಟಿ ರವಿ ಹೇಳಿಕೆ ವಿರುದ್ಧ ರಂಗಕರ್ಮಿಗಳಿಂದ ಖಂಡನಾ ನಿರ್ಣಯ - Artist Protest against CT Ravi Staement at Mysuru

ಅ.18ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ವಿವಿಧ ಅಕಾಡೆಮಿಗಳಿಗೆ ನೇಮಕಗೊಂಡಿರುವ ಕಲಾವಿದರನ್ನು ಪರಿಚಯ ಮಾಡಿಕೊಳ್ಳುವ ಸಂದರ್ಭದಲ್ಲಿ ಸಚಿವ ಸಿ.ಟಿ.ರವಿಯವರು, ಈ ಬಾರಿ ಮನೆ ಹಾಳು ಕಲಾವಿದರನ್ನು ದೂರ ಇಡಲಾಗಿದೆ ಎಂದು ಹೇಳುವ ಮೂಲಕ ಕಲಾವಿದರನ್ನು ಅಪಮಾನಿಸಿದ್ದಾರೆಂದು ಬೇಸರ ಹೊರಹಾಕಿದರು.

ಚಿವ ಸಿಟಿ ರವಿ ಹೇಳಿಕೆ ವಿರುದ್ಧ ರಂಗಕರ್ಮಿಗಳಿಂದ ಖಂಡನಾ ನಿರ್ಣಯ
author img

By

Published : Oct 21, 2019, 11:38 PM IST

ಮೈಸೂರು: ಈ ಬಾರಿ ಮನೆ ಹಾಳು ಕಲಾವಿದರನ್ನು ದೂರು ಇಡಲಾಗಿದೆ ಎಂದು ಹೇಳಿಕೆ ನೀಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರು ಇಂತಹ ಹೇಳಿಕೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ಖಂಡನಾ ನಿರ್ಣಯ ಮಾಡಿದೆ.

ರಂಗಾಯಣದ ಆವರಣದಲ್ಲಿರುವ ಕಿಂದರಜೋಗಿ ವೇದಿಕೆ ಮುಂಭಾಗ ಸಭೆ ಸೇರಿದ ಹವ್ಯಾಸಿ ರಂಗಕರ್ಮಿಗಳು, ಅಕ್ಟೋಬರ್​.18ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ವಿವಿಧ ಅಕಾಡೆಮಿಗಳಿಗೆ ನೇಮಕಗೊಂಡಿರುವ ಕಲಾವಿದರನ್ನು ಪರಿಚಯಾತ್ಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಸಚಿವ ಸಿ.ಟಿ.ರವಿಯವರು, ಈ ಬಾರಿ ಮನೆ ಹಾಳು ಕಲಾವಿದರನ್ನು ದೂರ ಇಡಲಾಗಿದೆ ಎಂದು ಹೇಳುವ ಮೂಲಕ ಕಲಾವಿದರನ್ನು ಅಪಮಾನಿಸಿದ್ದಾರೆ. ಕಲಾವಿದರನ್ನು ಸಮಾನತೆಯಿಂದ ನೋಡುವುದು ಸರ್ಕಾರ ಕೆಲಸ. ಆದರೆ ನಿಂದನೆ ಮಾತುಗಳನ್ನಾಡಿ ಕಲಾವಿದರ ಮನಸ್ಸು ನೋಯಿಸಿದ್ದಾರೆಂದು ಬೇಸರ ಹೊರಹಾಕಿದರು.

ಸಚಿವ ಸಿಟಿ ರವಿ ಹೇಳಿಕೆ ವಿರುದ್ಧ ರಂಗಕರ್ಮಿಗಳಿಂದ ಖಂಡನಾ ನಿರ್ಣಯ

ಕರ್ನಾಟಕದಲ್ಲಿ ಅತೀ ಹೆಚ್ಚು ರಂಗಭೂಮಿ ಚಟುವಟಿಕೆ ನಡೆಯುವ ಮತ್ತು ಹಲವಾರು ರಂಗತಂಡಗಳು ಅವಿರತವಾಗಿ ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಮೈಸೂರು ಜಿಲ್ಲೆಗೆ ನಾಟಕ ಅಕಾಡೆಮಿಯಲ್ಲಿ ಈ ಬಾರಿ ಯಾವುದೇ ಪ್ರಾತಿನಿತ್ಯ ಕೊಡದೇ ಇರುವುದು ಖಂಡನಾರ್ಹ. ಒಟ್ಟು 15 ಸದಸ್ಯರಿರುವ ಅಕಾಡೆಮಿಯಲ್ಲಿ 13 ಸದಸ್ಯರ ಹೆಸರನ್ನು ಮಾತ್ರ ಸರ್ಕಾರ ಪ್ರಕಟಿಸಿದ್ದು, ಬಾಕಿಯಿರುವ ಎರಡು ಸ್ಥಾಗಳಲ್ಲಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ರಂಗಕರ್ಮಿಗಳನ್ನು ನೇಮಕ ಮಾಡಬೇಕೆಂದು ಆಗ್ರಹಿಸಿದರು. ರಂಗಕರ್ಮಿಗಳಾದ ರಾಜಶೇಖರ ಕದಂಬ, ಮಾಧವ ಖರೆ, ಸುರೇಶ್ ಬಾಬು, ದೀಪಕ್ ಮೈಸೂರು, ಡಾ.ಗೀತಾಂಜಲಿ, ನಾಗರತ್ನ, ರಾಜೇಶ್, ಡಾ.ಕುಮಾರಸ್ವಾಮಿ, ಚಂದ್ರಶೇಖರ್, ಜಿಪಿಐಆರ್ ಹರಿದತ್ತ, ರಂಗವಲ್ಲಿ ತಂಡದ ರವಿಪ್ರಸಾದ್, ಸಿನೆಮಾ ನಿರ್ದೇಶಕ ರಘು, ಮೈಮ್ ರಮೇಶ್ ಮತ್ತಿತರರು ಖಂಡನಾ ನಿರ್ಣಯ ಸಭೆಯಲ್ಲಿ ಪಾಲ್ಗೊಂಡಿದ್ದರು.

Intro:ಖಂಡನಾ ನಿರ್ಣಯBody:ಮೈಸೂರು: ಈ ಬಾರಿ ಮನೆ ಹಾಳು ಕಲಾವಿದರರನ್ನು ದೂರು ಇಡಲಾಗಿದೆ ಎಂದು ಹೇಳಿಕೆ ನೀಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರು ಇಂತಹ ಹೇಳಿಕೆ ಹಿಂಪಡೆಯಬೇಕೆಂದು ಒತ್ತಾಯಿಸಿ ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ಖಂಡನಾ ನಿರ್ಣಯ ಮಾಡಿದೆ.
ರಂಗಾಯಣದ ಆವರಣದಲ್ಲಿರುವ ಕಿಂದರಜೋಗಿ ವೇದಿಕೆ ಮುಂಭಾಗ ಸಭೆ ಸೇರಿದ ಹವ್ಯಾಸಿ ರಂಗಕರ್ಮಿಗಳು, ಅ.೧೮ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ವಿವಿಧ ಅಕಾಡೆಮಿಗಳಿಗೆ ನೇಮಕಗೊಂಡಿರುವ ಕಲಾವಿದರನ್ನು ಪರಿಚಯಾತ್ಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಸಚಿವ ಸಿ.ಟಿ.ರವಿ ಅವರು, ಈ ಬಾರಿ ಮನೆ ಹಾಳು ಕಲಾವಿದರನ್ನು ದೂರ ಇಡಲಾಗಿದೆ ಎಂದು ಹೇಳುವ ಮೂಲಕ ಕಲಾವಿದರನ್ನು ಅಪಮಾನಿಸಿದ್ದಾರೆ. ಕಲಾವಿದರನ್ನು ಸಮಾನತೆಯಿಂದ ನೋಡುವುದು ಸರ್ಕಾರ ಕೆಲಸ.ಆದರೆ ನಿಂದನೆಗಳನ್ನು ಮಾತನಾಡಿ ಕಲಾವಿದರ ಮನಸನ್ನು ನೋವಿಸಿದ್ದಾರೆ ಎಂದ ರಂಗಕರ್ಮಿಗಳು ಬೇಸರ ಹೊರಹಾಕಿದರು.
ಕರ್ನಾಟಕದಲ್ಲೆ ಅತಿ ಹೆಚ್ಚು ರಂಗಭೂಮಿ ಚಟುವಟಿಕೆಗಳು ನಡೆಯುತ್ತ. ಹಲವಾರು ರೆಪರ್ಟರಿಗಳು ಹಾಗೂ ರಂಗತಂಡಗಳು ಅವಿರತವಾಗಿ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಈ ಮೈಸೂರು ಜಿಲ್ಲೆಗೆ ಈ ಬಾರಿಯ ನಾಟಕ ಅಕಾಡೆಮಿಯ ರಚನೆಯಲ್ಲಿ ಯಾವುದೇ ಪ್ರಾತಿನಿತ್ಯ ಕೊಡದ ಇರುವುದು ಖಂಡನಾರ್ಹ. ಒಟ್ಟು ೧೫ ಸದಸ್ಯರಿರುವ ಅಕಾಡೆಮಿಯಲ್ಲಿ ೧೩ ಸದಸ್ಯರ ಹೆಸರನ್ನು ಮಾತ್ರ ಸರ್ಕಾರ ಪ್ರಕಟಿಸಿದ್ದು ಬಾಕಿ ಇರುವ ೨ ಸ್ಥಾಗಳಲ್ಲಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ರಂಗಕರ್ಮಿಗಳನ್ನು ನೇಮಕ ಮಾಡಬೇಕೆಂದು ಆಗ್ರಹಿಸಿದರು.
ಸಚಿವರು ಕಲಾವಿದರನ್ನು ಕುರಿತು ಆಕ್ಷೇಪಾರ್ಕ ಹೇಳಿಕೆಯನ್ನು ನೀಡಿರುವುದು ಸಮಂಜಸಲ್ಲವೆಂದು ಮತ್ತು ಈ ಹೇಳಿಕೆಯಿಂದ ಇಲ್ಲಿಯವರೆಗೂ ವಿವಿಧ ಅಕಾಡೆಮಿಯ ಅಧ್ಯಕ್ಷರಾಗಿ ಮತ್ತು ಸದಸ್ಯರಾಗಿ ನೇಮಕಗೊಂಡಿರುವ ಹಲವಾರು ಹಿರಿಯ ರಂಗಕರ್ಮಿಗಳು ಹಾಗೂ ಸಾಹಿತಿಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ರಂಗಕರ್ಮಿಗಳು ಒಕ್ಕೊರಲಿನಿಂದ ಖಂಡಿಸಿದರು.
ರಂಗಕರ್ಮಿಗಳಾದ ರಾಜಶೇಖರ ಕದಂಬ, ಮಾಧವ ಖರೆ, ಸುರೇಶ್ ಬಾಬು, ದೀಪಕ್ ಮೈಸೂರು, ಡಾ.ಗೀತಾಂಜಲಿ, ನಾಗರತ್ನ, ರಾಜೇಶ್, ಡಾ.ಕುಮಾರಸ್ವಾಮಿ, ಚಂದ್ರಶೇಖರ್, ಜಿಪಿಐಆರ್ ಹರಿದತ್ತ, ರಂಗವಲ್ಲಿ ತಂಡದ ರವಿಪ್ರಸಾದ್, ನಿನೆಮಾ ನಿರ್ದೇಶಕ ರಘು, ಮೈಮ್ ರಮೇಶ್ ಮತ್ತಿತರರು ಖಂಡನಾ ನಿರ್ಣಯ ಸಭೆಯಲ್ಲಿ ಪಾಲ್ಗೊಂಡಿದ್ದರು. Conclusion:ಖಂಡನಾ ನಿರ್ಣಯ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.