ಮೈಸೂರು: ಗ್ಯಾಸ್ ಕಟರ್ ಬಳಿಸಿ ಎಟಿಎಂ ದರೋಡೆ ಮಾಡಿ ತಲೆ ಮರೆಸಿಕೊಂಡಿದ್ದ ಅಂತಾರಾಜ್ಯ ಕಳ್ಳರನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಬರೋಬ್ಬರಿ 2,50,000 ರೂಪಾಯಿ ಹಾಗೂ ಕೃತ್ಯಕ್ಕೆ ಬಳಸಲಾಗಿದ್ದ ಗ್ಯಾಸ್ ಕಟರ್, ಸಿಲಿಂಡರ್, ಗ್ಯಾಸ್ ಪೈಪ್ ವಶಕ್ಕೆ ಪಡೆದಿದ್ದಾರೆ.
ಬಂಧಿತರಿಬ್ಬರು ಹರಿಯಾಣ ಮೂಲದ ಅನೀಸ್ (30) ಬರ್ಖತ್ (22) ಎಂದು ಗುರುತಿಸಲಾಗಿದೆ. ಕಳೆದ ಸೆಪ್ಟೆಂಬರ್ 17ರಂದು ವಿಜಯನಗರ ವ್ಯಾಪ್ತಿಯ ಮದ್ರಾಸ್ ಫ್ಯಾಕ್ಟರಿ ಮುಂಭಾಗದ ಹೆಚ್ಡಿಎಫ್ಸಿ ಎಟಿಎಂನ ಶೆಟರ್ ಮುರಿದು ಗ್ಯಾಸ್ ಕಟರ್ನಿಂದ ಎಟಿಎಂ ಕತ್ತರಿಸಿ 12,81,600 ಲಕ್ಷ ರೂಪಾಯಿ ಹೊತ್ತೊಯ್ದಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಆರೋಪಿಗಳು ಹರಿಯಾಣದಲ್ಲಿರುವುದನ್ನು ಅರಿತು ಅಲ್ಲಿಗೆ ತೆರಳಿ ಬಂಧಿಸಿದ್ದಲ್ಲದೇ ಕರ್ನಾಟಕಕ್ಕೆ ಇಬ್ಬರನ್ನು ಕರೆ ತಂದಿದ್ದಾರೆ.
ವಿಚಾರಣೆ ವೇಳೆ, ಎಟಿಎಂ ಕಳ್ಳತನ ಒಪ್ಪಿಕೊಂಡಿದ್ದು ಆ ಹಣದಲ್ಲಿ 1 ಲಕ್ಷ ರೂಪಾಯಿ ತಮ್ಮ ಬ್ಯಾಂಕ್ ಖಾತೆಗೆ ಹಾಕಿರುವುದಾಗಿ ತಿಳಿಸಿದ್ದಾರೆ. ಈ ವೇಳೆ, 2,50,000 ನಗದನ್ನು ವಶಕ್ಕೆ ಪಡೆದಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.