ಮೈಸೂರು: ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿ, ಪಶ್ಚಿಮ ಬಂಗಾಳದ ಇಬ್ಬರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.
ವೇಶ್ಯಾವಾಟಿಕೆಗೆ ಯುವತಿಯರನ್ನ ಬಳಸಿದ ತುಮಕೂರಿನ ಕುಣಿಗಲ್ ತಾಲ್ಲೂಕಿನ ಸಖಗನಹಳ್ಳಿ ನಿವಾಸಿ ರವಿಕುಮಾರ್(29), ಕೇರಳ ಕಾಸರಗೂಡಿನ ರೆಹಮಾನ್(49), ಮೈಸೂರಿನ ಮೇಟಗಳ್ಳಿಯ ಬಿ.ಎಂ.ಶ್ರೀನಗರದ ಪ್ರಕಾಶ್, ರಾಜ್‌ಕುಮಾರ್ ರಸ್ತೆ ನಿವಾಸಿ ದೀಪಕ್ ಬಂಧಿತ ಆರೋಪಿಗಳು.
ಯರಗನಹಳ್ಳಿಯ ರಾಜ್‌ಕುಮಾರ್ ರಸ್ತೆಯ ಶುಭೋದಯ ಆಸ್ಪತ್ರೆಯ ಹತ್ತಿರ ಇರುವ ಕ್ರೌನ್ ರೆಸಿಡೆನ್ಸಿ ಲಾಡ್ಜ್ ಮೇಲೆ ದಾಳಿ ಮಾಡಿ ಮಾಡಿದ ಪೊಲೀಸರು ವೇಶ್ಯಾವಾಟಿಕೆಗೆ ದೂಡಿದ್ದ ಪಶ್ಚಿಮ ಬಂಗಾಳದ ಇಬ್ಬರು ಯುವತಿಯರನ್ನ ರಕ್ಷಿಸಿದ್ದಾರೆ. ವೇಶ್ಯಾವಾಟಿಕೆಗೆ ಬಳಸಲಾಗಿದ್ದ 3ಮೊಬೈಲ್, ಇದರಿಂದ ಸಂಪಾದಿಸಿದ್ದ 3500ರೂ.ಅನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.