ಮೈಸೂರು : ಪ್ರಪಂಚ ಎಷ್ಟೇ ಮುಂದುವರೆದಿದ್ದರೂ ಇನ್ನೂ ಹಲವು ಕಡೆ ಮೂಢನಂಬಿಕೆಗಳು ಸಾಗುತ್ತಿವೆ. ಇದರಿಂದ ಅನೇಕ ಜನರು ತಮ್ಮ ಜೀವನವನ್ನೇ ಕಳೆದುಕೊಳ್ಳುತ್ತಿದ್ದಾರೆ. ಮೂಢನಂಬಿಕೆಯಿಂದ ವಿಚಿತ್ರ ಆಚರಣೆಗಳನ್ನು ಮಾಡುತ್ತಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ನಂಜನಗೂಡು ತಾಲೂಕಿನ ಬಳ್ಳೂರಿ ಹುಂಡಿ ಗ್ರಾಮದಲ್ಲಿ ಮಾರಿಹಬ್ಬದಲ್ಲಿ ಧಾರ್ಮಿಕ ಆಚರಣೆಯ ಹೆಸರಿನಲ್ಲಿ ಜನ ಮೌಢ್ಯಕ್ಕೆ ಒಲುವು ತೋರುತ್ತಿದ್ದಾರೆ. ನಂಜನಗೂಡಿನಲ್ಲಿ ಪ್ರತಿ ವರ್ಷ ಮಾರ್ಚ್ ಬಂತೆಂದರೆ ಸಾಕು ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬದ ಹೆಸರಿನಲ್ಲಿ ಮೌಢ್ಯತೆಯ ಆಚರಣೆ ನಡೆಸುತ್ತಿದ್ದಾರೆ.
ಓದಿ: ದುರ್ಯೋಧನನಂತೆ ಸರೋವರದಲ್ಲಿ ಅವಿತುಕೊಂಡ ರೌಡಿ.. ಭೀಮನಂತೆ ಹೊರ ಕರೆತಂದ ‘ಡ್ರೋನ್’
ಇಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಬಾಲಕಿಯರನ್ನು ಮೌಢ್ಯ ಪೂಜೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಬಾಲಕಿಯರಿಗೆ ಹೊಟ್ಟೆಗೆ ಊಟ ನೀಡದೆ ಉಪವಾಸವಿರಿಸಿ ಅವರಿಗೆ ಶಕ್ತಿ ದೇವತೆಯ ಪಟ್ಟ ಕಟ್ಟುತ್ತಾರೆ. ಅಪ್ರಾಪ್ತ ಬಾಲಕಿಯ ತಲೆಯ ಮೇಲೆ ಕಳಶ ಇರಿಸಿ ಪೂಜೆ ಸಲ್ಲಿಸುವಂತೆ ಪೋಷಕರೇ ಬಲವಂತಪಡಿಸುತ್ತಿದ್ದಾರೆ.
ಮತ್ತೊಂದೆಡೆ ಕೆಲವರು ಹರಕೆ ಮಾಡಿಕೊಂಡು ಬಾಯಿಗೆ ಕಬ್ಬಿಣದ ವಸ್ತುಗಳಿಂದ ಚುಚ್ಚಿಕೊಂಡು ಹರಕೆ ತೀರಿಸುತ್ತಾರೆ. ನಂಜನಗೂಡು ತಾಲೂಕಿನ ಕೆಲವು ಗ್ರಾಮಗಳಲ್ಲಿ ಶಕ್ತಿ ದೇವತೆ ಮಾರಿ ಹಬ್ಬದ ಹಿನ್ನೆಲೆ ಈ ರೀತಿ ಆಚರಣೆಗಳು ನಡೆಯುತ್ತಿವೆ. ಈ ಬಗ್ಗೆ ಪ್ರಗತಿಪರ ಸಂಘ-ಸಂಸ್ಥೆಗಳು ಈ ಆಚರಣೆಯನ್ನ ನಿಲ್ಲಿಸಬೇಕೆಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ.