ETV Bharat / state

ಅನಾರೋಗ್ಯದಿಂದ ಬಳಲುತ್ತಿದ್ದ ಮೂಕ‌ ಬಸವನಿಗಾಗಿ 'ದರ್ಶನ': ಬೆಳಕು ಚೆಲ್ಲಿದ 'ಈಟಿವಿ ಭಾರತ' - Actor darshan help

ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಪ್ರಾಣಿ ಪ್ರೇಮಿ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರವೇ. ಅದರಲ್ಲೂ ಕುದುರೆ, ನಾಯಿ ಹಾಗೂ ಹಸು ಕಂಡರೆ ಪಂಚಪ್ರಾಣ ಅನ್ನೋದ್ರರಲ್ಲಿ ಎರಡು ಮಾತಿಲ್ಲ. ಅವರ ಸ್ವಭಾವವನ್ನು ಎತ್ತಿ ತೋರಿಸುವಂತಹ ಇನ್ನೊಂದು ನಿದರ್ಶನ ಇಲ್ಲಿದೆ.

Challenging Star Darshan
ಚಾಲೆಂಜಿಂಗ್ ಸ್ಟಾರ್ ದರ್ಶನ್‌
author img

By

Published : May 6, 2020, 10:42 PM IST

ಮೈಸೂರು: ಕಾಲಿಗೆ ಪೆಟ್ಟಾಗಿ ಮೇಲೇಳಲಾರದ ಸ್ಥಿತಿಯಲ್ಲಿರುವ ಬಸವನಿಗೆ ದರ್ಶನ್​​ ತಮ್ಮ ಆಪ್ತರನ್ನು ಕಳುಹಿಸಿ ವೈದ್ಯರ ಮೂಲಕ ಚಿಕಿತ್ಸೆ ಕೊಡಿಸುವ ಮೂಲಕ ಪ್ರಾಣಿ ಪ್ರಿಯ ಅನ್ನೋದನ್ನು ಮತ್ತೆ ಸಾಬೀತುಪಡಿಸಿದ್ದಾರೆ.

Challenging Star Darshan
ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಅವರ ಆಪ್ತರಿಂದ ಸಹಾಯ

ಇದನ್ನೂ ಓದಿ: ಅನಾರೋಗ್ಯದಿಂದ ಬಳಲುತ್ತಿರುವ ಈ ಮೂಕ ಬಸವ ನಟ ದರ್ಶನ್​ ಬಂದ್ರೆ ಹುಷಾರಾಗುತ್ತಂತೆ

ಜಿಲ್ಲೆಯ ಕಾಳಮ್ಮನಕೊಪ್ಪಲಿನಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಮೂಕ ಬಸವ, ನಟ ದರ್ಶನ್ ಬಂದರೆ ಹುಷಾರಾಗುತ್ತದೆ ಎಂಬ ಸುದ್ದಿಯನ್ನು ಈಟಿವಿ ಭಾರತ್ ಮೊದಲ ಬಾರಿಗೆ ಪ್ರಸಾರ ಮಾಡಿತ್ತು. ಈ ಸುದ್ದಿಗೆ ಸ್ಪಂದಿಸಿದ ನಟ ದರ್ಶನ್,​​ ಲಾಕ್​​ಡೌನ್ ಇದ್ದುದರಿಂದ ತಮ್ಮ ಪರವಾಗಿ ಆಪ್ತರನ್ನು ಕಳುಹಿಸಿ ವೈದ್ಯರ ಮೂಲಕ ಚಿಕಿತ್ಸೆ ಕೊಡಿಸಿದ್ದಾರೆ. ಈ ಮೂಲಕ ಈಟಿವಿ ಭಾರತ ವರದಿಗೆ ಸ್ಪಂದನೆ ಸಿಕ್ಕಿದೆ. ಅಲ್ಲದೆ ಶೀಘ್ರದಲ್ಲೇ ಅಲ್ಲಿಗೆ ಬಂದು ಆರೋಗ್ಯ ವಿಚಾರಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

ಈ ಬಸವ ಕಳೆದ ಬಾರಿ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ನಟ ದರ್ಶನ್ ಪ್ರಚಾರ ವಾಹನಕ್ಕೆ ಅಡ್ಡಲಾಗಿ ಬಂದು ನಿಂತಿದ್ದಾಗ ದರ್ಶನ್ ವಾಹನದಿಂದ ಕೆಳಗಿಳಿದು ಬೆನ್ನು ಸವರಿ ಬಸವನನ್ನು ಕಳುಹಿಸಿದ್ದರು. ಈಗ ಅದೇ ಬಸವ ಅನಾರೋಗ್ಯಕ್ಕೆ ತುತ್ತಾಗಿದ್ದು, ಗ್ರಾಮಸ್ಥರು ದರ್ಶನ್ ಬರಬೇಕೆಂದು ಮನವಿ ಮಾಡಿದ್ದರು. ಈ ಸುದ್ದಿಯನ್ನು ಈಟಿವಿ ಭಾರತ ಪ್ರಸಾರ ಮಾಡಿತ್ತು. ಇದಕ್ಕೆ ಸ್ಪಂದಿಸಿದ ದರ್ಶನ್ ಸಹಾಯ ಮಾಡಿದ್ದು, ಮತ್ತೊಮ್ಮೆ ದರ್ಶನ್ ಪ್ರಾಣಿ ಪ್ರೀತಿ ತೋರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.