ETV Bharat / state

ಮೈಸೂರಲ್ಲಿ ಅನುಮಾನಾಸ್ಪದ ಸೂಟ್​​ಕೇಸ್ ಪತ್ತೆ ಕೇಸ್​: ಅಷ್ಟಕ್ಕೂ ಅದರಲ್ಲಿ ಇದ್ದಿದ್ದೇನು ಗೊತ್ತಾ? - Anonymous Suit Case Found in Mysore

ನಗರದ ನಾರಾಯಣ ಶಾಸ್ತ್ರಿ ರಸ್ತೆಯ ಸಿದ್ದಪ್ಪ ವೃತ್ತದ ಬಳಿ ಇರುವ ಬ್ಯಾಂಕ್​ನ ಎಟಿಎಂ ಮುಂದೆ ಸೋಮವಾರ ಸಂಜೆಯಿಂದಲೇ ಸೂಟ್​​ಕೇಸ್ ಕಂಡುಬಂದಿತ್ತು. ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ ಈ ಸೂಟ್​ಕೇಸ್​ ಅನ್ನು ಪೊಲೀಸರು ಪರಿಶೀಲಿಸಿದಾಗ ಅದರಲ್ಲಿ ಬಲ್ಬ್​​ಗಳಿರುವುದು ಕಂಡುಬಂದಿದೆ.

Anonymous Suit Case Found in Mysore
ಮೈಸೂರಿನಲ್ಲಿ ಅನುಮಾನಾಸ್ಪದ ಸೂಟ್​​ಕೇಸ್ ಪತ್ತೆ
author img

By

Published : Jan 26, 2021, 9:37 AM IST

ಮೈಸೂರು : ಅನುಮಾನಾಸ್ಪದವಾಗಿ ಬ್ಯಾಂಕ್ ಮುಂದೆ ಇದ್ದ ಸೂಟ್ ಕೇಸ್ ಅನ್ನು ಬಾಂಬ್ ಪತ್ತೆ ದಳ ಬಂದು ಪರಿಶೀಲಿಸಿದಾಗ ಅದರಲ್ಲಿ ಬಲ್ಬ್​ ಇರುವುದು ಗೊತ್ತಾಗಿದೆ.

ಸೋಮವಾರ ರಾತ್ರಿ ನಗರದ ನಾರಾಯಣ ಶಾಸ್ತ್ರಿ ರಸ್ತೆಯ ಸಿದ್ದಪ್ಪ ವೃತ್ತದ ಬಳಿ ಇರುವ ಬ್ಯಾಂಕ್ ನ ಎಟಿಎಂ ಮುಂದೆ ಅನುಮಾನಾಸ್ಪದವಾಗಿ ಬಿದ್ದಿದ್ದ ಸೂಟ್ ಕೇಸ್ ಅನ್ನು ಮಧ್ಯ ರಾತ್ರಿ ಬಾಂಬ್ ಪತ್ತೆ ದಳ ಹಾಗೂ ಶ್ವಾನ ದಳ ಬಂದು ಪರಿಶೀಲನೆ ನಡೆಸಿದಾಗ ಅನುಮಾನಾಸ್ಪದ ಸಿಕ್ಕಿದ್ದು ಬಲ್ಬ್​ ಹೊರತು ಬೇರೇನೂ ಇರಲಿಲ್ಲ ಎಂದು ತಿಳಿದುಬಂದಿದೆ.

ಯಾರೋ ಕಿಡಿಗೇಡಿಗೇಡಿಗಳು ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಸೃಷ್ಟಿಸಲು ಈ ರೀತಿ ಸೂಟ್ ಕೇಸ್ ಇಟ್ಟಿರಬಹುದು ಅಥವಾ ಸೂಟ್ ಕೇಸ್ ಅನ್ನು ಮರೆತು ಹೋದರ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಪ್ರಕಾಶ್ ಗೌಡ ದೂರವಾಣಿಯಲ್ಲಿ 'ಈಟಿವಿ ಭಾರತ'ಕ್ಕೆ ತಿಳಿಸಿದರು.

ಓದಿ : ಮೈಸೂರಿನಲ್ಲಿ ಅನುಮಾನಾಸ್ಪದ ಸೂಟ್​​ಕೇಸ್ ಪತ್ತೆ : ಆತಂಕಗೊಂಡ ಜನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.