ETV Bharat / state

ಹಿಮಾಲಯದಲ್ಲಿ ಮೊದಲ ಬಾರಿ ಬಸವಧ್ವಜ ಹಾರಿಸಿದ ಅನ್ನಪೂರ್ಣ ಕುರುವಿನ ಕೊಪ್ಪ ಇನ್ನಿಲ್ಲ - ಹಿಮಾಲಯ

12 ಬಾರಿ ಹಿಮಾಲಯಕ್ಕೆ ಚಾರಣ ಬೆಳೆಸಿ, ಪ್ರಥಮ ಬಾರಿ ಹಿಮಾಲಯದಲ್ಲಿ ಬಸವಧ್ವಜ ಹಾರಿಸಿದ ಅನ್ನಪೂರ್ಣ ಕುರುವಿನ ಕೊಪ್ಪ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಅನ್ನಪೂರ್ಣ ಕುರುವಿನ ಕೊಪ್ಪ ಇನ್ನಿಲ್ಲ
ಅನ್ನಪೂರ್ಣ ಕುರುವಿನ ಕೊಪ್ಪ ಇನ್ನಿಲ್ಲ
author img

By

Published : Jul 5, 2020, 12:32 PM IST

ಮೈಸೂರು: ಹಿಮಾಲಯದಲ್ಲಿ ಮೊದಲ ಬಾರಿಗೆ ಬಸವ ಧ್ವಜ ಹಾರಿಸಿದ ಅನ್ನಪೂರ್ಣ ಕುರುವಿನ ಕೊಪ್ಪ (69) ಹೃದಯಾಘಾತದಿಂದ ಭಾನುವಾರ ಮುಂಜಾನೆ ನಿಧನರಾದರು.

ಧಾರವಾಡ ಜಿಲ್ಲೆಯ ಹುಯಿಲಗೋಳ ಕಾಶಪ್ಪ ಕೋಟಿ ಮತ್ತು ಬಸಮ್ಮ ದಂಪತಿಯ ಪುತ್ರಿಯಾಗಿ 1951 ಏಪ್ರಿಲ್ 4ರಂದು ಜನಿಸಿದ ಇವರು 12 ಬಾರಿ ಹಿಮಾಲಯ ಚಾರಣ ಮಾಡಿದ್ದಾರೆ. ಹಿಮಾಲಯದ 17,700 ಅಡಿ ಎತ್ತರದಲ್ಲಿ ಬಸವ ಧ್ವಜವನ್ನು ಹಾರಿಸಿದ ಪ್ರಥಮ ಮಹಿಳೆಯಾಗಿದ್ದಾರೆ. ಮಹಾ ಪ್ರಪಾತ ಎನಿಸಿದ ನೈನಿತಾಲ್, ಡಾಲ್ ಹೌಸಿ, ಮಸ್ಸೂರಿಯಲ್ಲಿ ಚಾರಣ ಮಾಡಿ ಬಂದಿದ್ದಾರೆ. ಮೌಂಟ್ ಎವರೆಸ್ಟ್​ನ ಬೇಸ್ ಕ್ಯಾಂಪಿಗೆ ಹೋಗಿ ಬಂದಿದ್ದರು. ನೇಪಾಳದ ಅನ್ನಪೂರ್ಣ ಪರ್ವತಗಳ ಶ್ರೇಣಿಗೆ ಒಂದು ತಿಂಗಳ ಟ್ರಕ್ಕಿಂಗ್ ಹೋಗಿ ಬಂದಿದ್ದರು.

ಅಂತಾರಾಷ್ಟ್ರೀಯ ಮ್ಯಾರಥಾನ್​ನಲ್ಲಿ ಭಾಗವಹಿಸಿ, ಓಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ರಾಜ್ಯಮಟ್ಟದ ಟ್ರಕಿಂಗ್​ನಲ್ಲಿ ನಾಯಕತ್ವ ವಹಿಸಿದ ಪ್ರಥಮ ಮಹಿಳೆ. ಮೂರು ಬಾರಿ ಅಮರನಾಥ ಯಾತ್ರೆ, ನಾಲ್ಕು ಬಾರಿ ವೈಷ್ಣೋದೇವಿ ಯಾತ್ರೆಯನ್ನು ಕೈಗೊಂಡು ಶಿಬಿರದ ನಾಯಕತ್ವ ವಹಿಸಿದ್ದರು. ಮೈಸೂರು ಗ್ರಾಹಕರ ಪರಿಷತ್ತಿನ ಸದಸ್ಯರಾಗಿ, ಭಾರತ್ ಯೂಥ್ ಹಾಸ್ಟೆಲ್ ಉಪಾಧ್ಯಕ್ಷರಾಗಿ ಚಾರಣದ ನಾಯಕತ್ವ ವಹಿಸಿದ್ದರು. ವಿವೇಕಾನಂದ ನಗರದ ಸ್ವಚ್ಛತಾ ಸ್ನೇಹಬಳಗದ ಅಧ್ಯಕ್ಷರಾಗಿ, ಜೆಎಸ್ಎಸ್ ಆಸ್ಪತ್ರೆಯ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ಬಸವದಳದಲ್ಲೂ ಸಕ್ರಿಯರಾಗಿ ಗುರುತಿಸಿಕೊಂಡಿದ್ದರು. ಆಂದೋಲನ ಪತ್ರಿಕೆ ಸಂಸ್ಥಾಪಕ ಸಂಪಾದಕ ದಿ‌.ರಾಜಶೇಖರ ಕೋಟಿ ಅವರ ಕಿರಿಯ ಸಹೋದರಿ ಇವರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.