ಮೈಸೂರು: ಇಂದು ಆಷಾಢದ ಕಡೆಯ ಶುಕ್ರವಾರವಾದ ಕಾರಣ ಅನಿತಾ ಕುಮಾರಸ್ವಾಮಿ ಹಾಗೂ ಹೆಚ್.ಡಿ.ರೇವಣ್ಣ ದಂಪತಿ ಪ್ರತ್ಯೇಕವಾಗಿ ಆಗಮಿಸಿ ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿದರು.
ಮಗ ಹಾಗೂ ಕುಟುಂಬಸ್ಥರ ಹೆಸರಿನಲ್ಲಿ ಅರ್ಚನೆ ಮಾಡಿಸಿದ ಬಳಿಕ ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ಪ್ರತಿ ವರ್ಷ ನಾನು ಚಾಮುಂಡಿ ಬೆಟ್ಟಕ್ಕೆ ತಪ್ಪದೇ ಬರುತ್ತೇನೆ. ಅದೇ ರೀತಿ ಈ ಬಾರಿಯೂ ಆಗಮಿಸಿದ್ದೇನೆ. ಬಹುಮತ ಇಲ್ಲದಿದ್ದರು ಯಡಿಯೂರಪ್ಪ ಆತುರ ಆತುರವಾಗಿ ಸರ್ಕಾರ ರಚನೆ ಮಾಡುತ್ತಿದ್ದಾರೆ. ಈ ಸರ್ಕಾರ ಅಸ್ತಿತ್ವಕ್ಕೆ ಬಂದರು ಹೆಚ್ಚು ದಿನ ಉಳಿಯಲಾರದು ಎಂದು ಹೇಳಿದರು.
ರೇವಣ್ಣ ದಂಪತಿಗಳಿಂದ ಪೂಜೆ:
ಕಳೆದ ನಾಲ್ಕು ವಾರಗಳಿಂದಲೂ ತಪ್ಪದೇ ಚಾಮುಂಡಿ ಬೆಟ್ಟಕ್ಕೆ ಆಗಮಿಸುತ್ತಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಇಂದು ಪತ್ನಿ ಭವಾನಿ ರೇವಣ್ಣ ಹಾಗೂ ಸೂರಜ್ ರೇವಣ್ಣ ಅವರ ಜೊತೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜಕೀಯ ಮಾತನಾಡಲು ರೇವಣ್ಣ ನಿರಾಕರಿಸಿದರು.