ETV Bharat / state

ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ.. ಇಂಡಿಗೋನಿಂದ ಮೈಸೂರು-ಹೈದರಾಬಾದ್​ ಸೇವೆ ಆರಂಭ..

author img

By

Published : Oct 28, 2019, 12:24 PM IST

Updated : Oct 28, 2019, 2:39 PM IST

ವಿಮಾನ ಪ್ರಯಾಣಿಕರಿಗೆ ದೀಪಾವಳಿ ಹಬ್ಬ ಸಿಹಿ ಸುದ್ದಿ ತಂದಿದೆ. ಇನ್ನು ಮುಂದೆ ಪ್ರತಿ ದಿನ ಮೈಸೂರು- ಹೈದರಾಬಾದ್​ ವಿಮಾನ ಸೇವೆ ಲಭ್ಯವಾಗಲಿದೆ. ನೂತನ ಏರ್​​ ಬಸ್​​ ಇದಕ್ಕೆ ಚಾಲನೆ ನೀಡಿದ್ದು, ಇನ್ನೂ ಹಲವು ರೂಟ್​​ಗಳಿಗೆ ವಿಸ್ತರಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. ​​

ಮೈಸೂರು-ಹೈದರಾಬಾದ್​

ಮೈಸೂರು: ಮೈಸೂರು ಮಂಡಕಹಳ್ಳಿ ವಿಮಾನ ನಿಲ್ದಾಣದ ಆಡಳಿತ ಮಂಡಳಿ ಪ್ರಯಾಣಿಕರಿಗೆ ಮತ್ತೊಂದು ಗಿಫ್ಟ್ ನೀಡಿದೆ. ನೂತನ ಏರ್‌ಬಸ್​ನ ಮೈಸೂರು-ಹೈದರಾಬಾದ್ ವಿಮಾನ ಸೇವೆ ಆರಂಭವಾಗಿದೆ.

ವಾರದ ಎಲ್ಲಾ ದಿನಗಳಲ್ಲೂ ಇಂಡಿಗೂ ಎಟಿಆರ್ 72 ವಿಮಾನ ಸೇವೆ ಲಭ್ಯವಾಗಲಿದೆ. ಪ್ರತಿ ನಿತ್ಯ ಹೈದರಾಬಾದ್‌ನಿಂದ ಸಂಜೆ 4.55ಕ್ಕೆ ಹೊರಟು 6.40ಕ್ಕೆ ಮೈಸೂರು ತಲುಪಲಿದೆ. ಮೈಸೂರಿನಿಂದ ಸಂಜೆ 7.40ಕ್ಕೆ ಹೊರಟು ರಾತ್ರಿ 9.15ರ ಸುಮಾರಿಗೆ ಹೈದರಾಬಾದ್ ತಲುಪಲಿದೆ. ಪ್ರತಿ ಮಂಗಳವಾರ ಹೈದರಾಬಾದ್‌ನಿಂದ ಬೆಳಗ್ಗೆ 11.20ಕ್ಕೆ ಹೊರಟು ಮಧ್ಯಾಹ್ನ 1ಗಂಟೆಗೆ ಮೈಸೂರಿಗೆ ಬರಲಿದೆ.

ಬಳಿಕ ಮಧ್ಯಾಹ್ನ 1.30ಕ್ಕೆ ಮೈಸೂರಿನಿಂದ ಹೊರಟು ಮಧ್ಯಾಹ್ನ 3.10ರ ಸುಮಾರಿಗೆ ಹೈದರಾಬಾದ್‌ಗೆ ತಲುಪಲಿದೆ. ಒಟ್ಟು 70 ಪ್ರಯಾಣಿಕರನ್ನು ಹೊತ್ತು ಸಾಗಬಲ್ಲ ಇಂಡಿಗೋ ಏರ್ ಬಸ್ ಪ್ರಯಾಣದ ವೆಚ್ಚ ಒಬ್ಬರಿಗೆ 2.650 ರೂಪಾಯಿ ಚಾರ್ಜ್ ಮಾಡಲಾಗುತ್ತದೆ.

ಮುಂದಿನ ದಿನಗಳಲ್ಲಿ ಮೈಸೂರಿನಿಂದ ಶಿರಡಿ, ಮಂಗಳೂರು, ತಿರುಪತಿಗೂ ವಿಮಾನ ಸೇವೆ ಆರಂಭಕ್ಕೆ ಸಿದ್ಧತೆ ನಡೆಸಲಾಗಿದೆ. ಸಂಸದ ಪ್ರತಾಪ ಸಿಂಹ ವಿಮಾನ ಹಾರಾಟಕ್ಕೆ ಭಾನುವಾರ ರಾತ್ರಿ ಹಸಿರು ನಿಶಾನೆ ತೋರಿದರು.

Intro:ವಿಮಾನ ನಿಲ್ದಾಣBody:ಮೈಸೂರು: ವಿಮಾನ ಪ್ರಯಾಣಿಕರಿಗೆ ದೀಪಾವಳಿ ಸಿಹಿ ಸುದ್ದಿ.ಮೈಸೂರು ಮಂಡಕಹಳ್ಳಿ ವಿಮಾನ ನಿಲ್ದಾಣದ ಆಡಳಿತ ಮಂಡಳಿಯಿಂದ ಪ್ರಯಾಣಿಕರಿಗೆ ಮತ್ತೊಂದು ಗಿಫ್ಟ್ ನೀಡಿದೆ.

ನೂತನ ಎರ್ ಬಸ್ ಗೆ ವಾಟರ್ ಸೆಲ್ಯೂಟ್ ಮಾಡಿ ವೆಲ್ಕಮ್ ಮಾಡಿದ ಮಂಡಕಹಳ್ಳಿ ಫೈರ್ ಆಫಿಸರ್ಸ್.ಮೈಸೂರು-ಹೈದರಾಬಾದ್ ವೀಮಾನ ಸೇವೆ ಆರಂಭವಾಗಿದೆ.

ವಾರದ ಎಲ್ಲಾ ದಿನಗಳಲ್ಲೂ
ಇಂಡಿಗೂ ಎಟಿಆರ್ 72 ವಿಮಾನ ಸೇವೆ ಲಭ್ಯ.ಪ್ರತೀನಿತ್ಯ ಹೈದರಾಬಾದ್ ನಿಂದ ಸಂಜೆ 4.55ಕ್ಕೆ ಹೊರಟು 6.40ಕ್ಕೆ ಮೈಸೂರು ತಲುಪಲಿದೆ.

ಮೈಸೂರಿನಿಂದ ಸಂಜೆ 7.40ಕ್ಕೆ ಹೊರಟು ರಾತ್ರಿ 9.15 ಸುಮಾರಿಗೆ ಹೈದರಾಬಾದ್ ತಲುಪಲಿದೆ.ಪ್ರತೀ ಮಂಗಳವಾರ ಹೈದರಾಬಾದ್ ನಿಂದ ಬೆಳಗ್ಗೆ 11.20ಕ್ಕೆ ಹೊರಟು ಮಧ್ಯಾಹ್ನ 1ಗಂಟೆಗೆ ಮೈಸೂರಿಗೆ ಬರಲಿದೆ.

ಬಳಿಕ ಮಧ್ಯಾಹ್ನ 1.30ಕ್ಕೆ ಮೈಸೂರಿನಿಂದ ಹೊರಟು ಮಧ್ಯಾಹ್ನ 3.10ಸುಮಾರಿಗೆ ಹೈದರಾಬಾದ್ ಗೆ ತಲುಪಲಿದೆ.ಒಟ್ಟು 70 ಪ್ರಯಾಣಿಕರನ್ನು ಹೊತ್ತು ಸಾಗಬಲ್ಲ ಇಂಡಿಗೋ ಏರ್ ಬಸ್ ಪ್ರಯಾಣದ ವೆಚ್ಚ ಒಬ್ಬರಿಗೆ 2.650 ರೂಪಾಯಿ ಚಾರ್ಜ್ ಮಾಡಲಾಗುತ್ತದೆ.

ಮುಂದಿನ ದಿನಗಳಲ್ಲಿ ಮೈಸೂರಿನಿಂದ ಶಿರಡಿ, ಮಂಗಳೂರು, ತಿರುಪತಿಗೂ ವಿಮಾನ ಸೇವೆ ಆರಂಭಕ್ಕೆ ಸಿದ್ಧತೆ ನಡೆಸಲಾಗಿದೆ.

ವಿಮಾನ ಹಾರಾಟಕ್ಕೆ ಭಾನುವಾರ ರಾತ್ರಿ ಹಸಿರು ನಿಶಾನೆ ತೋರಿದ ಸಂಸದ ಪ್ರತಾಪಸಿಂಹ,ಮೈಸೂರು ಮಂಡಕಹಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಮಂಜುನಾಥ್, ಅಧಿಕಾರಿಗಳು ಇದ್ದರು.Conclusion:ವಿಮಾನ‌ ನಿಲ್ದಾಣ
Last Updated : Oct 28, 2019, 2:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.