ETV Bharat / state

ಕೋವಿಡ್​​ ಸಂಕಷ್ಟ ಕಾಲದಲ್ಲಿ ನಟ ದರ್ಶನ್ ನೆರವಾಗಿದ್ದಾರೆ: ಸಚಿವ ಎಸ್​.ಟಿ.ಸೋಮಶೇಖರ್ - Mysore

ಕೋವಿಡ್​​​ನಂತಹ ಸಂಕಷ್ಟದ ಕಾಲದ ನಡುವೆಯೂ ಸಿಎಸ್​​ಆರ್ ವತಿಯಿಂದ ಜಿಲ್ಲೆಗೆ ಸಹಾಯ ಮಾಡುತ್ತಿರುವವರಿಗೆಲ್ಲರಿಗೂ ಲಾಕ್​​ಡೌನ್ ಮುಗಿದ ನಂತರ ಅವರಿಗೆ ಸರ್ಕಾರದಿಂದ ಅಭಿನಂದನೆ ಸಲ್ಲಿಸಲಾಗುವುದು ಎಂದು ಸಚಿವ ಎಸ್​.ಟಿ.ಸೋಮಶೇಖರ್ ಹೇಳಿದರು.

Minister S.T. Somashekar
ಸಚಿವ ಎಸ್​.ಟಿ.ಸೋಮಶೇಖರ್
author img

By

Published : Jun 11, 2021, 1:44 PM IST

ಮೈಸೂರು: ಕೋವಿಡ್​​ನಂತಹ ಕಷ್ಟ ಕಾಲದಲ್ಲಿ ಮೃಗಾಲಯಕ್ಕೆ ಸಾಕಷ್ಟು ನಷ್ಟವಾಗಿದೆ. ಈ ಸಂದರ್ಭ ಚಿತ್ರ ನಟ ದರ್ಶನ್ ಅವರ ಅಭಿಮಾನಿಗಳು ಒಂದು ಕೋಟಿ ರೂಪಾಯಿ ಹಣವನ್ನು ನೀಡಿದ್ದಾರೆ. ಹೀಗಾಗಿ ಜಿಲ್ಲಾಡಳಿತದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಏಷಿಯನ್ ಪೇಂಟ್ಸ್ ಹಾಗೂ ನೆಸ್ಲೆ ಕಂಪನಿಯ ಸ್ಯಾನಿಟೈಸರ್ ಹಾಗೂ ಆಕ್ಸಿಜನ್ ಕಾನ್ಸಂಟ್ರೇಟರ್​ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.

ಸಚಿವ ಎಸ್​.ಟಿ.ಸೋಮಶೇಖರ್

ಕೋವಿಡ್​​ನಂತಹ ಸಂಕಷ್ಟದ ಕಾಲದ ನಡುವೆಯೂ ಸಿಎಸ್​​ಆರ್ ವತಿಯಿಂದ ಜಿಲ್ಲೆಗೆ ಸಹಾಯ ಮಾಡುತ್ತಿರುವವರಿಗೆಲ್ಲರಿಗೂ ಲಾಕ್​​ಡೌನ್ ಮುಗಿದ ನಂತರ ಸರ್ಕಾರದಿಂದ ಅಭಿನಂದನೆ ಸಲ್ಲಿಸಲಾಗುವುದು. ಅಲ್ಲದೇ ಸಂಕಷ್ಟದ ಕಾಲದಲ್ಲಿ ಜಿಲ್ಲೆಗೆ ಹಲವಾರು ಮಂದಿ ಸಹಾಯ ಮಾಡುತ್ತಿದ್ದಾರೆ. ಸರ್ಕಾರದ ನಿಯಮದಂತೆ ಜಿಲ್ಲೆಯಲ್ಲಿ ಲಾಕ್​​ಡೌನ್ ವಿಸ್ತರಣೆಯಾಗಿದೆ. ಇದರ ಬಗ್ಗೆ ಮೊದಲೇ 11 ವಿಧಾನಸಭಾ ಕ್ಷೇತ್ರಗಳ ಶಾಸಕರು ಹಾಗೂ ಸಂಸದರ ಜತೆ ಚರ್ಚಿಸಿದ ನಂತರವೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ನಂತರ ನಗರದ ಬನ್ನಿ ಮಂಟಪದ ಯಲ್ಲಮ್ಮ ಕಾಲೋನಿಯಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಆಹಾರದ ಕಿಟ್​​ಗಳನ್ನು ವಿತರಿಸಿದರು. ಬಳಿಕ ಅರಗು ಮತ್ತು ಬಣ್ಣದ ಕಾರ್ಖಾನೆಗೆ ತೆರಳಿ ಕಾರ್ಮಿಕರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಓದಿ: ಒಂದು ಕೋಟಿ ದಾಟಿದ ದೇಣಿಗೆ ಮೊತ್ತ: ನಟ ದರ್ಶನ್‌ಗೆ ಮೃಗಾಲಯ ಪ್ರಾಧಿಕಾರ ಧನ್ಯವಾದ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.