ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸುತ್ತಿದ್ದು, ಈ ಬಾರಿಯ ದಸರಾ ಮಹೋತ್ಸವದಲ್ಲಿ ಚಲನಚಿತ್ರೋತ್ಸವ, ಕಾರ್ಯಾಗಾರ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದಸರಾ ಚಲನಚಿತ್ರೋತ್ಸವನ್ನು ಸೆಪ್ಟೆಂಬರ್ 26 ರಂದು ಬೆಳಗ್ಗೆ 11.00 ಗಂಟೆಗೆ ಕಲಾಮಂದಿರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನಟ ಡಾ. ಶಿವರಾಜ್ ಕುಮಾರ್ ಅವರು ಉದ್ಘಾಟಿಸಲಿದ್ದಾರೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಟೌನ್ ಪ್ಲಾನಿಂಗ್ ಸದಸ್ಯರು ಹಾಗೂ ಚಲನಚಿತ್ರೋತ್ಸವ ಸಮಿತಿಯ ವಿಶೇಷಾಧಿಕಾರಿ ಆರ್. ಶೇಷು ಅವರು ಮಾಹಿತಿ ನೀಡಿದರು.
ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. 2022ನೇ ಸಾಲಿನ ದಸರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಮುಖ ಆಕರ್ಷಣೆಯಾಗಿರುವ ಚಲನಚಿತ್ರೋತ್ಸವನ್ನು ಸೆ. 27ರಿಂದ ಆರಂಭವಾಗಿ ಅಕ್ಟೋಬರ್ 3ರವರೆಗೆ ಒಟ್ಟು 112 ಚಿತ್ರಗಳು ಪ್ರದರ್ಶನಗೊಳ್ಳಲಿದ್ದು 56 ಕನ್ನಡ, 28 ಪನೋರಮಾ, 28 ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನಿಮಾಗಳು ಐನಾಕ್ಸ್ನಲ್ಲಿ 3 ಮತ್ತು ಡಿಆರ್ಸಿಯ 1 ಸ್ಕ್ರೀನ್ ನಲ್ಲಿ ಪ್ರದರ್ಶನಗೊಳ್ಳಲಿದೆ ಎಂದರು.
ಮೂರು ದಿನದ ಕಾರ್ಯಾಗಾರ ಸೆ. 22 ರಿಂದ 24 ರವರೆಗೆ ನಡೆಯಲಿದ್ದು, ಚಲನಚಿತ್ರ ನಿರ್ಮಾಣದ ಪೂರ್ವ ತಯಾರಿ ಕುರಿತು ಸಿನಿಮಾ ಪ್ರಿಯರಿಗೆ ಮಾಹಿತಿ ನೀಡಲಾಗುತ್ತದೆ. ಕಾರ್ಯಾಗಾರವನ್ನು ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಉದ್ಘಾಟಿಸಲಿದ್ದಾರೆ. ಕಾರ್ಯಾಗಾರದಲ್ಲಿ ಚಂಪಾ ಶೆಟ್ಟಿ, ಪ್ರಶಾಂತ್ ಪಂಡಿತ್, ಪ್ರವೀಣ್ ಕೃಪಾರ್ಕ, ಪವನ್ ಕುಮಾರ್, ಶಂಕರ್ ಎನ್ ಸಂಡೂರು, ಪನ್ನಗಾಭರಣ, ಮಂಸೊರೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ. ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರನ್ನು ಆಹ್ವಾನಿಸಲಾಗಿದ್ದು, ಪ್ರವೇಶಕ್ಕೆ 300 ರೂ. ಶುಲ್ಕವನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ಬೆಟ್ಟದ ಹೂ ಚಿತ್ರ ವೀಕ್ಷಣೆ: ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಅವರು ಶಕ್ತಿಧಾಮದ ಮಕ್ಕಳೊಂದಿಗೆ ಸೆ. 27ರಂದು ಪುನೀತ್ ರಾಜ್ ಕುಮಾರ್ ಅಭಿನಯಿಸಿರುವ ಬೆಟ್ಟದ ಹೂ ಚಿತ್ರವನ್ನು ವೀಕ್ಷಿಸಲಿದ್ದಾರೆ. ಚಲನಚಿತ್ರೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಟ ನಟಿಯರಾದ ಡಾ. ಶಿವರಾಜ್ ಕುಮಾರ್, ಅಮೃತ ಅಯ್ಯಂಗಾರ್, ಕಾವ್ಯಶೆಟ್ಟಿ, ಸುಧಾರಾಣಿ, ಅನುಪ್ರಭಾಕರ್ ಸೇರಿದಂತೆ ಅನೇಕ ತಾರೆಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಆಕ್ಟ್ 1978 ಸಿನಿಮಾ ಪ್ರದರ್ಶನ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ದಸರಾ ಚಲನಚಿತ್ರೋತ್ಸವ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಟಿ. ಕೆ ಹರೀಶ್ ಅವರು ಮಾತನಾಡಿ, ದಿ. ಪುನೀತ್ ರಾಜ್ಕುಮಾರ್ ಹಾಗೂ ಸಂಚಾರಿ ವಿಜಯ್ ನಟಿಸಿರುವ ಜನಪ್ರಿಯ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದ್ದು ಪುನೀತ್ ನಟನೆಯ ಬೆಟ್ಟದ ಹೂ, ಅಂಜನಿಪುತ್ರ, ರಾಜಕುಮಾರ, ಮೈತ್ರಿ, ಪೃಥ್ವಿ, ಯುವರತ್ನ ಹಾಗೂ ಸಂಚಾರಿ ವಿಜಯ್ ಅಭಿನಯದ ತಲೆದಂಡ, ಪುಕ್ಸಟ್ಟೆ ಲೈಫ್, ಆಕ್ಟ್ 1978 ಸಿನಿಮಾಗಳು ಪ್ರದರ್ಶನಗೊಳ್ಳಲಿದೆ ಎಂದರು.
ವಿಂಡೋಸೀಟ್ ಪ್ರದರ್ಶನ: ಕನ್ನಡ ಚಿತ್ರಗಳಾದ 100, 777 ಚಾರ್ಲಿ, ಶ್ರೀಸುತ್ತೂರು ಮಠ - ಗುರುಪರಂಪರೆ, ಆದ್ಯಾ, ಅವನೇ ಶ್ರೀಮನ್ನನಾರಾಯಣ, ಅವತಾರ ಪುರುಷ, ಬಡವರಾಸ್ಕಲ್, ಭಜರಂಗಿ-2, ಭರಾಟೆ, ದಿಯಾ, ದೃಶ್ಯ-2, ಗಾಳಿಪಟ, ಗರುಡಗಮನ ವೃಷಭ ವಾಹನ, ಜಂಟಲ್ ಮನ್, ಹರಿಕಥೆ ಅಲ್ಲ ಗಿರಿಕಥೆ, ಹೀರೋ, ಇಂಡಿಯಾ ವರ್ಸಸ್ ಇಂಗ್ಲೆಂಡ್, ಇನ್ಸ್ಪೆಕ್ಷರ್ ವಿಕ್ರಂ, ಕವಚ, ಕವಲುದಾರಿ, ಕೆಜಿಎಫ್ 1, ಕೆಜಿಎಫ್ 2, ಲವ್ ಮಾಕ್ಟೇಲ್ 1, ಲವ್ ಮಾಕ್ಟೇಲ್-2, ಮದಗಜ, ಮುಗಿಲ್ ಪೇಟೆ, ನಿನ್ನ ಸನಿಹಕೆ, ಒಂಭತ್ತನೇ ದಿಕ್ಕು, ರೈರ್ಡ, ರಾಬರ್ಟ್, ಸಖತ್, ಸಲಗ, ಸೀತಾರಾಮ ಕಲ್ಯಾಣ, ಶಿವಾಜಿ ಸುರತ್ಕಲ್, ವಿಕ್ರಾಂತ್ ರೋಣ, ವಿಂಡೋಸೀಟ್ ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದರು.
ವಿಡೋ ಎ ಸೈಲೆನ್ಸ್ ಪ್ರದರ್ಶನ: ಭಾರತೀಯ ಚಿತ್ರಗಳಾದ ಎ ಡಾಗ್ ಹಿಸ್ ಮ್ಯಾನ್, ಹರಿವ ನದಿಗೆ ಮೈಯೆಲ್ಲಾ ಕಾಲು, ಅಡಿಯುಗೊಡಾರ್ಡ್, ಅಗ್ನಿವರ್ಷ, ಐಸೇ ಹಿ, ಬೂಂಬಾ ರೈಡ್, ಈ ಮಣ್ಣು, ಘೋಡೇ ಕೋ ಜಲೇಬಿ ಖಿಲಾನೆ ಲೇಜಾರಿಯಾ ಹೂಂ, ಹಾರುವ ಹಂಸಗಳು, ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ, ಇಂಟು ದಿ ಮಿಸ್ಟ್, ದಿ ಕ್ಲೌಡ್ ದಿ ಮ್ಯಾನ್, ಮನುಸಂಗಡ, ಮಿಂಚುಹುಳು, ಮೂಕಜ್ಜಿಯ ಕನಸುಗಳು, ನೀಲಿಹಕ್ಕಿ, ನೋಯ್, ಪದಕ, ಸಾರಾ ವಜ್ರ, ಉರಿಯಟ್ಟು, ವಿಡೋ ಎ ಸೈಲೆನ್ಸ್ ಪ್ರದರ್ಶನಗೊಳ್ಳಲಿವೆ ಎಂದರು.
ವಿಶ್ವಚಿತ್ರಗಳಾದ ಜೆಂಟಲ್ ಕ್ರೀರ್ಚ, ಎ ಹೀರೋ, ಅಡಲ್ಟ್ಸ್ ಇನ್ ದಿ ರೂಮ್, ಅನರ್ದ ರೌಂಡ್, ಆ್ಯಶ್ ಇಸ್ ದಿ ಪ್ಯೂರೆಸ್ಟ್ ವೈಟ್, ಕ್ಯಾಪರ್ನಾಮ್, ಎವರಿಥಿಂಗ್ ಎವೆರಿರ್ವೇ ಅಳ್ ಎಟ್ ಒನ್ಸ್, ಎಕೈಲ್, ಐ ಡೇನಿಯಲ್ ಬ್ಲೇಕ್, ಲವ್ ಲೆಸ್, ನಾರ್ಥ್ ಸಿ, ಪ್ಯಾರಲೆಲ್ ಮದರ್ಸ್, ಪ್ಯಾರಾ ಸೈಟ್, ಪೋಟ್ರೇಟ್ ಎ ಲೇಡಿ ಆನ್ರೈ, ಸಾರಿ ವಿ ಮಿಸ್ಡ್ ಯೂ, ಸ್ಪೆರ್ನ್ಸ, ಬೈಸಿಕಲ್ ಥೀವ್ಸ್, ದಿ ಲಾಸ್ಟ್ ಎಕ್ಸೆ ಕ್ಯೂಷನ್, ದಿ ಸೆವೆಂತ್ ಸೀಲ್, ದಿ ಟ್ಯೂರಿನ್ ಹಾರ್ಸ್, ಥ್ರೋನ್ ಆಫ್ ದಿ ಬ್ಲಡ್ , ಆನ್ ಡೈನ್ , ವಾಗಾ ಬಾಂಡ್, ವಾಕ್ಬೌಟ್, ವೆನ್ ಹಿರ್ಟ್ಲರ್ ಸ್ಟೋಲ್ ಪಿಂಕ್ ರ್ಯಾಬಿಟ್, ವಿಮೆನ್ ಇನ್ ದಿ ಡ್ಯೂನ್ಸ್ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಓದಿ: ಅರಮನೆಯಲ್ಲಿ ಆನೆ ಮರಿಗೆ ನಾಮಕರಣ.. 'ಶ್ರೀದತ್ತಾತ್ರೇಯ' ಹೆಸರಿಟ್ಟ ರಾಜಮಾತೆ ಪ್ರಮೋದ ದೇವಿ