ETV Bharat / state

ಅಲ್‌ಖೈದಾ ವಿಡಿಯೋ ಹಿಂದೆ ಆರ್‌ಎಸ್‌ಎಸ್‌: 'ಸಿದ್ದರಾಮಯ್ಯ ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ' - ಅಲ್ ಖೈದಾ ವಿಡಿಯೋ ಹಿಂದೆ ಆರ್​ಎಸ್​ಎಸ್ ಕೈವಾಡ ಇದೆ ಎಂದು ಸಿದ್ದರಾಮಯ್ಯ

ಅಲ್ ಖೈದಾ ವಿಡಿಯೋ ಹಿಂದೆ ಆರ್​ಎಸ್​ಎಸ್ ಕೈವಾಡ ಇದೆ ಎಂಬ ಸಿದ್ದರಾಮಯ್ಯ ಆರೋಪ ಸರಿಯಲ್ಲ ಎಂದು ಸಚಿವ ಡಾ. ಅಶ್ವತ್ಥ ನಾರಾಯಣ ಹೇಳಿದ್ದಾರೆ.

Minister Ashwaththanarayana
ಸಚಿವ ಅಶ್ವತ್ಥನಾರಯಣ ತಿರುಗೇಟು
author img

By

Published : Apr 7, 2022, 3:38 PM IST

ಮೈಸೂರು: ಅಲ್ ಖೈದಾ ವಿಡಿಯೋ ಹಿಂದೆ ಆರ್‌ಎಸ್​ಎಸ್ ಕೈವಾಡ ಇದೆ ಎಂಬ ಸಿದ್ದರಾಮಯ್ಯರ ಆರೋಪ ಸರಿಯಲ್ಲ. ಪುರಾವೆ ಇಲ್ಲದೆ ಆರೋಪ ಮಾಡುವುದು ಎಷ್ಟು ಸರಿ?. ಅವರು ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ ಎಂದು ಸಚಿವ ಡಾ. ಅಶ್ವತ್ಥ ನಾರಾಯಣ ಹೇಳಿದರು.

ಮೈಸೂರಿನಲ್ಲಿ ಮಾತನಾಡಿದ ಸಚಿವರು, ಇಂತಹ ಸೂಕ್ಷ್ಮ ವಿಚಾರಗಳಲ್ಲಿ ಯಾವುದೇ ರೀತಿಯ ಪುರಾವೆ ಇಲ್ಲದೆ ಮಾತನಾಡಬಾರದು. ಮೊದಲು ಸಿದ್ದರಾಮಯ್ಯ ಅಲ್ ಖೈದಾ ಸಂಘಟನೆಯ ಹೇಳಿಕೆ ಖಂಡಿಸಬೇಕಿತ್ತು. ಅದನ್ನು ಬಿಟ್ಟು ಬೇಜವಾಬ್ದಾಯುತವಾಗಿ ಒಂದು ಸಂಘಟನೆಯ ಮೇಲೆ ಆರೋಪ ಮಾಡಿದ್ದಾರೆ. ಇಂಥ ಹೇಳಿಕೆಗಳಿಗೆ ಯಾವುದೇ ಬೆಲೆ ಇಲ್ಲ ಎಂದರು.

ಈ ಹಿಂದೆ ಅವರು ಹಿಜಾಬ್ ಬಗ್ಗೆ ಮಾತನಾಡಲು ಹೋಗಿ, ಅದನ್ನು ಕಾವಿಗೆ ಹೋಲಿಸಿ ಟೀಕೆಗೊಳಗಾಗಿದ್ದರು. ಅಲ್ ಖೈದಾ ವಿಡಿಯೋ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಮುಸ್ಕಾನ್ ಮುಗ್ಧ ಹುಡುಗಿ.. ಅಲ್​​ಖೈದಾದಿಂದ ಜನರ ಮುಗ್ಧತೆ ಅಸ್ತ್ರವಾಗಿ ಬಳಕೆ: ಸಚಿವ ಸುಧಾಕರ್

ಮುಸ್ಲಿಮರ ಓಲೈಕೆಗೆ ಸಿದ್ದು- ಹೆಚ್​ಡಿಕೆ ಪೈಪೋಟಿ: ಹೆಚ್​ಡಿಕೆ ಹಾಗೂ ಸಿದ್ದರಾಮಯ್ಯ ನಮಗೆ ಹೆಚ್ಚು ಮುಸ್ಲಿಂ ವೋಟ್ ಬೇಕೆಂದು ಕಾಂಪಿಟೇಷನ್ ಶುರು ಮಾಡಿದ್ದಾರೆ. ಆದ್ದರಿಂದ ಇಬ್ಬರ ನಡುವೆ ಮುಸ್ಲಿಂ ವೋಟ್​ಗಾಗಿ ಪೈಪೋಟಿ ಶುರುವಾಗಿದೆ ಎಂದು ಸಚಿವ ಅಶ್ವತ್ಥ ನಾರಾಯಣ ಟೀಕಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.