ಮೈಸೂರು: ಹೆಚ್‌ಎಲ್‌ಬಿಸಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಶ್ರೀನಿವಾಸ್ ಮನೆ ಮೇಲೆ ಬುಧವಾರ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು, ಇಂದು ಅವರ ಬ್ಯಾಂಕ್ ಲಾಕರ್ ಪರಿಶೀಲಿಸಿದರು. ಶ್ರೀನಿವಾಸ್ ಮಾನೆ ಅವರ ಬ್ಯಾಂಕ್ ಲಾಕರ್ ಅಲ್ಲಿ ಒಂದೂವರೆ ಕೆಜಿ ಚಿನ್ನಾಭರಣ ಪತ್ತೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ನಗರದ ಸರಸ್ವತಿಪುರಂನಲ್ಲಿರುವ ಕೆನರಾ ಬ್ಯಾಂಕ್ಗೆ 8 ಅಧಿಕಾರಿಗಳ ತಂಡ ಆಗಮಿಸಿದ್ದು, ಪರಿಶೀಲನೆ ನಡೆಸಿದರು. ಸತತ 6 ಗಂಟೆಗೂ ಹೆಚ್ಚು ಕಾಲ ವಿಚಾರಣೆ ಮಾಡಿದ್ದು, ಒಂದೂವರೆ ಕೆಜಿ ಚಿನ್ನಾಭರಣ ಪತ್ತೆಯಾಗಿದೆ ಎನ್ನಲಾಗುತ್ತಿದೆ. ಎಸಿಬಿ ಅಧಿಕಾರಿಗಳ ವಿಚಾರಣೆ ನಂತರ ಬ್ಯಾಂಕ್ನಿಂದ ಶ್ರೀನಿವಾಸ್ ಹಾಗೂ ಅವರ ಪತ್ನಿ ಮನೆಗೆ ತೆರಳಿದರು. ಆದರೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ಇಂಜಿನಿಯರ್ ಶ್ರೀನಿವಾಸ್ ದಂಪತಿ ನಿರಾಕರಿಸಿದರು.
ಕೆನರಾ ಬ್ಯಾಂಕ್ನಿಂದ ಅಧಿಕಾರಿಗಳು ಪ್ರಿಂಟರ್, ಬ್ಯಾಗ್‌ನೊಂದಿಗೆ ಅಧಿಕಾರಿಗಳು ಹೊರ ಬಂದಿದ್ದಾರೆ. ಭ್ರಷ್ಟ ಅಧಿಕಾರಿ ವಿರುದ್ಧ ಎಸಿಬಿ ತನಿಖೆ ಚುರುಕುಗೊಳಿಸಿದ್ದು, ಬೇನಾಮಿ ಹೆಸರಿನಲ್ಲಿ ಆಸ್ತಿ ಖರೀದಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಎಲ್ಲಾ ಆಯಾಮದಲ್ಲಿ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಧಾರವಾಡ SDM ಮೆಡಿಕಲ್ ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕೋವಿಡ್..2 ಹಾಸ್ಟೆಲ್ ಸೀಲ್ಡೌನ್!