ETV Bharat / state

ಮೈಸೂರಿನಲ್ಲಿ ಅಧಿಕಾರಿಗಳ ಎದುರು ಮಚ್ಚು ಹಿಡಿದು ಮಹಿಳೆಯ ರಂಪಾಟ: ದೂರು ದಾಖಲು - ಅಧಿಕಾರಿಗಳ ಎದುರು ಮಚ್ಚು ಹಿಡಿದು ಮಹಿಳೆಯ ರಂಪಾಟ

ಬಾಡಿಗೆ ಹಣ ಕೇಳಲು ಬಂದ ಅಧಿಕಾರಿಗಳನ್ನು ಬೆದರಿಸಲು ಮಚ್ಚು ಹಿಡಿದು ಮಹಿಳೆ ರಂಪಾಟ ನಡೆಸಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಮಹಿಳೆಯ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

Etv Bharata-woman-with-a-machete-went-on-a-rampage-against-the-officers
Etv Bharatಮೈಸೂರಿನಲ್ಲಿ ಅಧಿಕಾರಿಗಳೆದುರು ಮಚ್ಚು ಹಿಡಿದು ಮಹಿಳೆ ರಂಪಾಟ: ದೂರು ದಾಖಲು
author img

By

Published : Dec 12, 2022, 5:52 PM IST

Updated : Dec 12, 2022, 6:09 PM IST

ಮೈಸೂರಿನಲ್ಲಿ ಅಧಿಕಾರಿಗಳ ಎದುರು ಮಚ್ಚು ಹಿಡಿದು ಮಹಿಳೆಯ ರಂಪಾಟ: ದೂರು ದಾಖಲು

ಮೈಸೂರು: ಬಸ್​ ನಿಲ್ದಾಣದ ವಾಣಿಜ್ಯ ಸಂಕೀರ್ಣದ ಬಾಡಿಗೆ ಬಾಕಿ ಹಣ ಪಾವತಿಸುವಂತೆ ನೋಟಿಸ್ ನೀಡಿದ ಅಧಿಕಾರಿಗಳಿಗೆ ಬಾಡಿಗೆದಾರನ ಪತ್ನಿ ಮಚ್ಚು ಹಿಡಿದು ರಂಪಾಟ ಮಾಡಿದ ಘಟನೆ ನಗರದ ಸಾತಗಳ್ಳಿ ಬಸ್ ಡಿಪೋದಲ್ಲಿ ನಡೆದಿದೆ. ಶನಿವಾರ ಈ ಘಟನೆ ನಡೆದಿದ್ದು, ಅಧಿಕಾರಿಗಳ ದೂರಿನ ಮೇರೆಗೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.

ಬಸ್​ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ಶಫೀಕ್​ ಅಹಮದ್​ ಎಂಬುವರು 12 ವರ್ಷಗಳ ಅವಧಿಗೆ ಬಾಡಿಗೆಗೆ ಪರವಾನಗಿ ಪಡೆದಿದ್ದರು. ಆದರೆ ಬಾಡಿಗೆ ಹಣ ಬಾಕಿ ಉಳಿಸಿಕೊಂಡಿದ್ದರು. ಇದರ ಒಪ್ಪಂದವು ಇತ್ತೀಚೆಗೆ ಡಿ.10ರಂದು ಮುಕ್ತಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಬಾಕಿ ಉಳಿದ 1 ಕೋಟಿ 80 ಲಕ್ಷ ಹಣ ಪಾವತಿಸುವಂತೆ ಸಂಬಂಧಿಸಿದ ಅಧಿಕಾರಿಗಳು ನೋಟಿಸ್ ನೀಡಿದ್ದರು.

ಈ ವಿಚಾರವಾಗಿ ಶನಿವಾರ ಅಧಿಕಾರಿಗಳು ಸಾತಗಳ್ಳಿ ಬಸ್ ನಿಲ್ದಾಣ ಬಳಿ ಬಂದು ವಿಚಾರಿಸುತ್ತಿರುವಾಗ ಬಾಡಿಗೆ ಪಡೆದ ಶಫಿ ಹಾಗೂ ಅವರ ಪತ್ನಿ ಮುನಿ ಬುನ್ನಿಸಾ ಅಧಿಕಾರಿಗಳನ್ನು ನಿಂದಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಈ ಸಂದರ್ಭದಲ್ಲಿ ಶಫಿಯ ಪತ್ನಿ ಮುನಿ ಬುನ್ನಿಸಾ ಅಧಿಕಾರಿಗಳಿಗೆ ಮಚ್ಚು ಹಿಡಿದು ರಂಪಾಟ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ದೃಶ್ಯವನ್ನು ಸ್ಥಳೀಯರು ಮೊಬೈಲ್​ನಲ್ಲಿ ಸೆರೆಹಿಡಿದಿದ್ದು, ವೈರಲ್ ಆಗಿದೆ. ಘಟನೆ ಸಂಬಂಧ ದಂಪತಿ ವಿರುದ್ಧ ಅಧಿಕಾರಿಗಳು ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಐಪಿಸಿ 1860 (U/s-353,504,506,34) ಅಡಿ ಪ್ರಕರಣ ದಾಖಲಾಗಿದ್ದು, ದಂಪತಿ ತಲೆಮರೆಸಿಕೊಂಡಿದ್ದಾರೆ.

ಇದನ್ನೂ ಓದಿ: ಅಡುಗೆ ಮಾಡುತ್ತಿರುವಾಗ ಸಿಲಿಂಡರ್ ಸ್ಫೋಟ: ದಾವಣಗೆರೆಯಲ್ಲಿ ಮಗ ಸಾವು, ತಾಯಿ ಸ್ಥಿತಿ ಚಿಂತಾಜನಕ

Last Updated : Dec 12, 2022, 6:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.