ಮೈಸೂರು : ನವರಾತ್ರಿಯ 7ನೇ ದಿನ ವಿದ್ಯಾ ದೇವಿಯಾದ ಸರಸ್ವತಿಗೆ ಅಗ್ರ ಪೂಜೆ ಸಲ್ಲಿಸುವುದು ವಾಡಿಕೆ. ಅದರಂತೆ ಇಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸರಸ್ವತಿಗೆ ವಿಶೇಷ ಪೂಜೆ ಸಲ್ಲಿಸಿದರು.
ಉತ್ತರ ಪ್ರದೇಶದ ರಾಮನವರಾತ್ರಿಯಂತೆ ರಾಜ್ಯದಲ್ಲಿ ನವದುರ್ಗೆಯರ ನವರಾತ್ರಿ ಮಾಡಿ ಪೂಜಿಸುವುದು ವಿಶೇಷ. ಅದರಲ್ಲೂ ದುರ್ಗೆ ಅವರೂಪಿಣಿಯಾದ ಮಹಾಸರಸ್ವತಿಯನ್ನು ಅರಮನೆಯ ಧರ್ಮಗ್ರಂಥಗಳೊಟ್ಟಿಗೆ ಇಟ್ಟು ಪೂಜೆ ಸಲ್ಲಿಸುವುದು ಮೈಸೂರು ಅರಮನೆ ವಿಶೇಷ. ಅದರಂತೆ ಇಂದು ವಿಶೇಷವಾಗಿ ಸರಸ್ವತಿ ಪೂಜೆ ನಡೆಯಿತು.
ಈ ಹಿಂದೆ ರಾಜರ ಕಾಲದಲ್ಲಿ ರಾಜವಂಶಸ್ಥರಿಗೆ ಸಕಲ ವಿದ್ಯೆಯು ಲಭಿಸಲಿ ಎಂದು ಪೂಜೆ ಸಲ್ಲಿಸುತ್ತಿದ್ದರು. ಆದರೀಗ ಸಮಸ್ತ ಜನರಿಗೂ ಕಲ್ಯಾಣವಾಗಿ, ಸಮೃದ್ಧಿ ಸಿದ್ದಿಯಾಗಿ ಸರಸ್ವತಿ ಮಹಾದೇವಿ ಒಲಿಯಲಿ ಎಂದು ನಾಡಿನ ಪ್ರಜೆಗಳ ಪರವಾಗಿ ಮಹಾರಾಜರು ಅಗ್ರ ಪೂಜೆಯೊಂದಿಗೆ ಬೇಡಿಕೊಳ್ಳುವುದು ಮೈಸೂರು ಮಹಾಸಂಸ್ಥಾನ ಒಡೆಯರ ಸರಸ್ವತಿ ಅಗ್ರಪೂಜೆಯ ವಿಶೇಷತೆಯಾಗಿದೆ.