ಮೈಸೂರು : ಒಂದೇ ಮರದಲ್ಲಿ ಕೊಕ್ಕರೆಗಳು ಸರಣಿಯಾಗಿ ಮೃತಪಟ್ಟಿವೆ. ಇದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಹಕ್ಕಿ ಜ್ವರದ ಶಂಕೆ ವ್ಯಕ್ತವಾಗಿರೋದ್ರಿಂದ ಮೃತ ಪಕ್ಷಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ನಗರದ ಹೆಬ್ಬಾಳ ಕೆರೆ ವ್ಯಾಪ್ತಿಯ ಮರಗಳಲ್ಲಿ ಕೆಲ ದಿನಗಳಿಂದ ನಿರಂತರವಾಗಿ ಕೊಕ್ಕರೆಗಳು ಅಸುನೀಗುತ್ತಿವೆ. ಈವರೆಗೂ 50ಕ್ಕೂ ಹೆಚ್ಚು ಕೊಕ್ಕರೆಗಳು ಸಾವನ್ನಪ್ಪಿವೆ. ಇಲ್ಲಿನ ನಿವಾಸಿಗಳು ನಗರ ಪಾಲಿಕೆ ಆರೋಗ್ಯಾಧಿಕಾರಿಗಳ ಗಮನಕ್ಕೂ ತಂದಿದ್ದಾರೆ.
ಪ್ರಯೋಗಾಲಯದ ವರದಿ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ. ಜಿಲ್ಲೆಯ ಮೇಟಗಳ್ಳಿ ನಿವಾಸಿ ರಾಮಣ್ಣ ಎಂಬುವರು ಮುಂದಿನ ವಾರ ನಡೆಯುವ ಗ್ರಾಮ ದೇವತೆ ಹಬ್ಬಕ್ಕಾಗಿ 12 ಕೋಳಿಗಳನ್ನು ಗೂಡಿನಲ್ಲಿ ಸಾಕಿಕೊಂಡಿದ್ದರು. ಅವುಗಳು ಸಹ ಮೃತಪಟ್ಟಿವೆ.