ETV Bharat / state

ಮೈಸೂರು ವಿದ್ಯಾರ್ಥಿಗಳ ಹೊಸ ಆವಿಷ್ಕಾರ: ಇನ್ನೇಕೆ ಕಬ್ಬಿಣ, ಬಿದಿರು ಬಳಸಿ ಮನೆ ನಿರ್ಮಾಣ ಮಾಡಿ!

author img

By

Published : Dec 10, 2021, 3:21 PM IST

ಬಿದಿರು ಬಳಸಿ ಮಾಡಿದ ಸ್ಕ್ಯಾಬ್ ಗಳು ಅಷ್ಟೇ ಗಟ್ಟಿಯಾಗಿದ್ದು, ಸುಮಾರು 700 ಕೆ.ಜಿ.ಯಷ್ಟು ಭಾರ ತಡೆದುಕೊಳ್ಳುವಲ್ಲಿ ಸಮರ್ಥವಾಗಿವೆ ಎಂಬುದನ್ನು ವಿದ್ಯಾರ್ಥಿಗಳು ಆವಿಷ್ಕರಿಸಿದ್ದಾರೆ.

ಬಿದಿರು ಉಪಯೋಗಿಸಿ ಮನೆ ನಿರ್ಮಾಣ
ಬಿದಿರು ಉಪಯೋಗಿಸಿ ಮನೆ ನಿರ್ಮಾಣ

ಮೈಸೂರು: ಮನೆ ಕಟ್ಟಲು ಕಬ್ಬಿಣದ ಬದಲು ಬಿದಿರು ಬಳಸಬಹುದು ಎಂಬ ಹೊಸ ಸಂಶೋಧನೆಯನ್ನು, ವಿದ್ಯಾವರ್ಧಕ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು ನಡೆಸಿದ್ದು, ಕಟ್ಟಡ ನಿರ್ಮಾಣ ವೆಚ್ಚ ತಗ್ಗಿಸುವಲ್ಲಿ ಈ ತಂತ್ರಜ್ಞಾನ ಸಹಕಾರಿಯಾಗಿದೆ.

ಬಿದಿರು ಉಪಯೋಗಿಸಿ ಮನೆ ನಿರ್ಮಾಣ
ಬಿದಿರು ಉಪಯೋಗಿಸಿ ಮನೆ ನಿರ್ಮಾಣ

ನಗರದ ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ನಾಲ್ವರು ಪ್ರತಿಭಾವಂತ ವಿದ್ಯಾರ್ಥಿಗಳಾದ ನಿಶಾಂತ್, ಕಾರ್ತಿಕ್.ಎಂ.ಪಿ, ಮಹೇಂದ್ರ ಹಳಂಡಗೆ, ಚಿರಾಗ್. ಎಚ್. ಆರ್ ಈ ವಿನೂತನ ಆವಿಷ್ಕಾರ ಮಾಡಿದ್ದು, ಕಬ್ಬಿಣದ ಬದಲಿಗೆ ಸ್ಥಳೀಯವಾಗಿ ಲಭ್ಯವಿರುವ ಬಿದಿರು ಬಳಸಿ ಪ್ರಾಯೋಗಿಕವಾಗಿ ಯಶ ಕಂಡಿದ್ದಾರೆ.

ಮೈಸೂರು ವಿದ್ಯಾರ್ಥಿಗಳಿಂದ ಹೊಸ ಆವಿಷ್ಕಾರ
ಮೈಸೂರು ವಿದ್ಯಾರ್ಥಿಗಳಿಂದ ಹೊಸ ಆವಿಷ್ಕಾರ

ದೇಶದ ಯಾವುದೇ ಪ್ರದೇಶದಲ್ಲಿ ಬಿದಿರು ಬಳಸಿ, ಮನೆ ನಿರ್ಮಿಸಬಹುದಾಗಿದ್ದು, ಒಂದು ಅಂತಸ್ತಿನ ಕಟ್ಟಡಕ್ಕೆ ಈ ತಂತ್ರಜ್ಞಾನ ಹೆಚ್ಚು ಸೂಕ್ತವಾಗಿದೆ. ಒಂದು ಟನ್ ಕಬ್ಬಿಣ ತಯಾರಿಸಲು ಸುಮಾರು 2.4 ಟನ್ ನಷ್ಟು ಇಂಗಾಲದ ಡೈಆಕ್ಸೈಡ್ ಪರಿಸರ ಸೇರುತ್ತದೆ. ಬಿದಿರನ್ನು ಬಳಸಿ ಮಾಡಿದ ಸ್ಲ್ಯಾಬ್ ಗಳು ಅಷ್ಟೇ ಗಟ್ಟಿಯಾಗಿದ್ದು, ಸುಮಾರು 700 ಕೆ.ಜಿ.ಯಷ್ಟು ಭಾರ ತಡೆದುಕೊಳ್ಳುವಲ್ಲಿ ಸಮರ್ಥವಾಗಿದೆ ಎಂಬುದನ್ನು ವಿದ್ಯಾರ್ಥಿಗಳು ಆವಿಷ್ಕರಿಸಿದ್ದಾರೆ.

ಮೈಸೂರು ವಿದ್ಯಾರ್ಥಿಗಳಿಂದ ಹೊಸ ಆವಿಷ್ಕಾರ
ಮೈಸೂರು ವಿದ್ಯಾರ್ಥಿಗಳಿಂದ ಹೊಸ ಆವಿಷ್ಕಾರ

ಚಾವಣಿಯ ಸ್ಲ್ಯಾಬ್​​ಗೆ ಕಬ್ಬಿಣ ಹಾಕುವ ಬದಲು ಬಿದಿರಿನಲ್ಲಿ ಕೋಳಿ ಪಂಜರದ ರೀತಿ ಎಣಿಸಿ, ಅದಕ್ಕೆ 2.5 ಸೆಂ.ಮೀ ಕಾಂಕ್ರೀಟ್ ತುಂಬಿದ ಬಳಿಕ ಸಮತಲ ಮತ್ತು ಲಂಭಾಕಾರವಾಗಿ ಸುಮಾರು 700 ಕೆ.ಜಿ.ಯಷ್ಟು ಭಾರ ಹಾಕಿ ಪರೀಕ್ಷಿಸಲಾಗಿದ್ದು, ಇಷ್ಟು ತೂಕವನ್ನು ಸಮರ್ಥವಾಗಿ ತಡೆದಿರುವುದು ಪ್ರಯೋಗ ಶಾಲೆಯಲ್ಲಿ ಸಾಬೀತಾಗಿದೆ‌.

ಮೈಸೂರು ವಿದ್ಯಾರ್ಥಿಗಳಿಂದ ಹೊಸ ಆವಿಷ್ಕಾರ
ಮೈಸೂರು ವಿದ್ಯಾರ್ಥಿಗಳಿಂದ ಹೊಸ ಆವಿಷ್ಕಾರ

ವಿದ್ಯಾರ್ಥಿಗಳ ಈ ಪ್ರಯೋಗಕ್ಕೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿಯು ವರ್ಷದ ಉತ್ತಮ ಆವಿಷ್ಕಾರ ಎಂದು ಪರಿಗಣಿಸಿದ್ದು, ಈ ತಂತ್ರಜ್ಞಾನಕ್ಕೆ ಭೌತಿಕ ಹಕ್ಕು ಸ್ವಾಮಕ್ಕೆ ಅರ್ಜಿ ಸಲ್ಲಿಸಲಾಗಿದೆ.

ಬಿದಿರು ಉಪಯೋಗಿಸಿ ಮನೆ ನಿರ್ಮಾಣ
ಬಿದಿರು ಉಪಯೋಗಿಸಿ ಮನೆ ನಿರ್ಮಾಣ

ವಿದ್ಯಾರ್ಥಿಗಳ ಆವಿಷ್ಕಾರದ ಕುರಿತು ಪ್ರತಿಕ್ರಿಯಿಸಿದ ಪ್ರಾಜೆಕ್ಟ್ ಮಾರ್ಗದರ್ಶಕ ಡಾ.ಉಮೇಶ್.ಪಿ.ಕೆ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿಗೆ ರಾಜ್ಯದ 250 ಕಾಲೇಜುಗಳಿಂದ ನಾನಾ ರೀತಿಯ ತಂತ್ರಜ್ಞಾನದ ಮಾದರಿಗಳನ್ನು ಕಳುಹಿಸಲಾಗಿತ್ತು. ಅದರಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಸಲ್ಲಿಸಿದ ಟೆಕ್ನಾಲಜಿಗೆ ಸಮಿತಿ ಮೆಚ್ಚುಗೆ ವ್ಯಕ್ತಪಡಿಸಿ, ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ನೀಡಿರುವುದು ಸಂತಸದ ವಿಚಾರ. ಇದರೊಂದಿಗೆ ಪೇಟೆಂಟ್​​​ಗೂ ಅರ್ಜಿ ಸಲ್ಲಿಸಿರುವುದಾಗಿ ಮಾಹಿತಿ ನೀಡಿದರು.

ಇದನ್ನೂ ಓದಿ : ಮದುವೆ ಮನೆಯಲ್ಲಿ ಕೋವಿಡ್​ ವ್ಯಾಕ್ಸಿನೇಷನ್: ಆರೋಗ್ಯ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.