ಮೈಸೂರು: ಕ್ಷುಲ್ಲಕ ಕಾರಣಕ್ಕೆ ಅಳಿಯನೊಬ್ಬ ತನ್ನ ಮಾವನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮೈಸೂರಿನ ಗೌಸಿಯಾನಗರದಲ್ಲಿ ನಡೆದಿದೆ.
ನಗರದ ಗೌಸಿಯಾನಗರದ ನಿವಾಸಿಯಾದ ಸಲೀಂ (40) ಕೊಲೆಯಾದ ವ್ಯಕ್ತಿಯಾಗಿದ್ದು , ಈತ ತನ್ನ ಮಗಳನ್ನು 5 ವರ್ಷಗಳ ಹಿಂದೆ ನದೀಮ್ ಮಹಮ್ಮದ್ ಖಾನ್ಗೆ ಕೊಟ್ಟು ಮದುವೆ ಮಾಡಿದ್ದರು. ಮಗಳು ಅಳಿಯನ ನಡುವೆ ಕೆಲವು ತಿಂಗಳಿಂದ ಜಗಳ ನಡೆಯುತ್ತಿದ್ದು, ಜಗಳ ನಡೆದಾಗಲೆಲ್ಲಾ ಸಲೀಂ ಮಗಳ ಮನೆಗೆ ಬಂದು ರಾಜಿ ಮಾಡುತ್ತಿದ್ದರು.
ಪ್ರತಿ ಬಾರಿಯೂ ಮಗಳನ್ನೇ ವಹಿಸಿಕೊಳ್ಳುತ್ತಾರೆ ಎಂದು ಕೋಪಗೊಂಡಿದ್ದ ಅಳಿಯ ನದೀಮ್ ಮಹಮ್ಮದ್ ಖಾನ್, ಮಾವ ಸಲೀಂ ನಮಾಜ್ಗೆ ಹೋಗುತ್ತಿದ್ದ ಸಂದರ್ಭದಲ್ಲಿ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಸ್ಥಳದಲ್ಲೇ ಸಲೀಂ ಸಾವನ್ನಪ್ಪಿದ್ದು, ಪೊಲೀಸರು ಆರೋಪಿ ನದೀಮ್ ಮಹಮ್ಮದ್ ಖಾನ್ನನ್ನು ಬಂಧಿಸಿದ್ದಾರೆ.
ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.