ಮೈಸೂರು: ವ್ಯಕ್ತಿಯೊಬ್ಬ ತನ್ನ ತಾಯಿ, ಗರ್ಭಿಣಿ ಪತ್ನಿ ಹಾಗೂ ಮುದ್ದಾದ ಇಬ್ಬರು ಮಕ್ಕಳನ್ನು ನಿರ್ದಯವಾಗಿ ಕೊಂದಿರುವ ಅಮಾನವೀಯ ಘಟನೆ ಸರಗೂರು ತಾಲ್ಲೂಕಿನ ಸ್ವಾಮಿಗೌಡನಹುಂಡಿಯಲ್ಲಿ ನಡೆದಿದೆ.
ತಾಯಿ ಕೆಂಪನಂಜಮ್ಮ (65), ತುಂಬು ಗರ್ಭಿಣಿಯಾದ ಪತ್ನಿ ಗಂಗಾ (28) ಮಕ್ಕಳಾದ ಸಾಮ್ರಾಟ್ (ಎರಡೂವರೆ ವರ್ಷ), ರೋಹಿತ್ (ಒಂದೂವರೆ ವರ್ಷ) ಕೊಲೆಯಾಗಿದ್ದಾರೆ. ಆರೋಪಿ ಮಣಿಕಂಠ ಸ್ಥಳದಿಂದ ಪರಾರಿಯಾಗಿದ್ದಾನೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಸುದ್ದಿ ತಿಳಿದ ಕೂಡಲೇ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಭಾರತದಲ್ಲಿ ಕೋವಿಡ್ ರಣಕೇಕೆ: ಒಂದೇ ದಿನ 3.79 ಲಕ್ಷ ಕೇಸ್ ಪತ್ತೆ, 3,645 ಜನರು ಬಲಿ