ETV Bharat / state

ಸಮ್ಮರ್ ಟೈಮ್ ಎಂದು ಸಮಯ ವ್ಯರ್ಥ ಮಾಡದ ಟೀಚರ್: ಅಲೆಮಾರಿ ಮಕ್ಕಳ ಹೃದಯಗೆದ್ದ ಉಪನ್ಯಾಸಕರು - ಈಟಿವಿ ಭಾರತ್ ಕನ್ನಡ ಸುದ್ದಿ

ಅಲೆಮಾರಿ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಮೈಸೂರಿನ ಉಪನ್ಯಾಸಕಿಯರು ಸಾರ್ವಜನಿಕರ ಮನ್ನಣೆಗೆ ಪಾತ್ರರಾಗಿದ್ದಾರೆ.

ಅಲೆಮಾರಿ ಮಕ್ಕಳಿಗೆ ಪಾಠ ಮಾಡಿದ ಉಪನ್ಯಾಸಕರು
ಅಲೆಮಾರಿ ಮಕ್ಕಳಿಗೆ ಪಾಠ ಮಾಡಿದ ಉಪನ್ಯಾಸಕರು
author img

By

Published : May 2, 2023, 3:44 PM IST

ಮಹಾವೀರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಜಿ ಜ್ಯೋತಿ ಅವರು ಹೇಳಿದರು

ಮೈಸೂರು : ಬೇಸಿಗೆಯ ಸಮಯ ಎಂದು ದಿನಗಳನ್ನು ವ್ಯರ್ಥ ಮಾಡದೇ ಅದೆ ಸಮಯವನ್ನು ಅಲೆಮಾರಿ ಮಕ್ಕಳಿಗೆ ಪಾಠ ಮಾಡುವ ಮೂಲಕ ಉಪನ್ಯಾಸಕಿಯೊಬ್ಬರು ಮಕ್ಕಳ ಹೃದಯ ಗೆದ್ದಿದ್ದಾರೆ. ಮೈಸೂರಿನ ರಾಜೀವ್ ನಗರದ ಶೆಡ್​ನಲ್ಲಿ ವಾಸವಾಗಿರುವ ಅಲೆಮಾರಿ ಜನಾಂಗವು ಸುಮಾರು ಇಪ್ಪತ್ತು ವರ್ಷಗಳಿಂದ ಗುಡಿಸಲಿನಲ್ಲೇ ವಾಸವಿದ್ದಾರೆ. ಇನ್ನೂ ಕೆಲವರು ಐದು ತಿಂಗಳ‌ ಹಿಂದೆ ಬಂದು ನೆಲೆಸಿದ್ದಾರೆ.

ತಮ್ಮ ಕುಲಕಸುಬು ಬಲೂನ್ ತಯಾರು ಮಾಡುವುದು, ಜಾತ್ರೆಗಳಲ್ಲಿ ಮಕ್ಕಳು ಆಟ ಆಡುವ ಸಾಮಗ್ರಿಗಳನ್ನು ತಯಾರಿ ಮಾಡಿ, ಮಾರಾಟ ಮಾಡುವುದು. ಅದರಲ್ಲಿ ಬಂದ ಹಣದಲ್ಲಿ ಒಂದೊತ್ತು ಊಟ ಮಾಡುವುದು. ಎರಡು ಮೂರು ತಿಂಗಳಿಗೊಮ್ಮೆ ಊರೂರು ಅಲೆದಾಡಿ ಜೀವನ ಸಾಗಿಸುತ್ತಿದ್ದಾರೆ. ಈ ಮಧ್ಯೆ ತಮ್ಮ ಮಕ್ಕಳಿಗೆ ಶಿಕ್ಷಣ ಇಲ್ಲದೆ ವಂಚಿತರಾಗಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ.

ಇದನ್ನೂ ಓದಿ: ಖಾಸಗಿ ಶಾಲೆಯನ್ನೂ ಮೀರಿಸುತ್ತೆ ಕಲಬುರಗಿಯ ಹೈಟೆಕ್ ಅಂಗನವಾಡಿ: ಪುಟಾಣಿಗಳಿಗೆ ಕನ್ನಡ, ಇಂಗ್ಲಿಷ್​ ಪಾಠ

ಅಲೆಮಾರಿ ಮಕ್ಕಳಲ್ಲಿ ಶಿಕ್ಷಣದ ಅಲೆ ಚಿಗುರಿಸಿದ ಉಪನ್ಯಾಸಕಿಯರು: ಅಲೆಮಾರಿ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದ ಮೈಸೂರಿನ ಮಹಾವೀರ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕಿ ಜಿ ಜ್ಯೋತಿ ಮತ್ತು ಸ್ನೇಹಿತೆ ಸೇಂಟ್ ಜೋಸೆಫ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ನಿಲುಫರ್ ರಾಜೀವ್ ನಗರಕ್ಕೆ ತೆರಳಿ ಮಕ್ಕಳಿಗೆ ಪಾಠ ಹೇಳಲು ಮುಂದಾಗಿದ್ದಾರೆ.

ಇದನ್ನೂ ಓದಿ: ಶತಮಾನದ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಅಡಿಕೆ ಕೃಷಿ.. ಶಿಕ್ಷಣದ ಜೊತೆ ವಿದ್ಯಾರ್ಥಿಗಳಿಗೆ ಕೃಷಿ ಚಟುವಟಿಕೆ ಪಾಠ

ಬೇಸಿಗೆ ರಜಾ ದಿನಗಳಲ್ಲಿ ಸರ್ಕಾರಿ ಸಂಬಳ ಪಡೆದು ಶಾಲಾ ಕಾಲೇಜಿನ ಶಿಕ್ಷಕರು ಮತ್ತು ಉಪನ್ಯಾಸಕರು ಮಜಾ ಮಾಡುತ್ತಿರುವ ಇಂತಹ ಸಂದರ್ಭದಲ್ಲಿ ಅಲೆಮಾರಿ ಮಕ್ಕಳಿಗೆ ಬೇಸಿಗೆ ಶಿಬಿರ ಹಮ್ಮಿಕೊಂಡು ಅಭಿಯಾನ ನಡೆಸುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಮಕ್ಕಳಲ್ಲಿ ಶಿಕ್ಷಣ ಕಲಿಯಬೇಕು ಎನ್ನುವ ಆಸಕ್ತಿ ಎದ್ದು ಕಾಣುತ್ತಿದೆ. ಶಿಕ್ಷಣ ಪಡೆಯದೇ ಚಿಕ್ಕ ವಯಸ್ಸಿನಲ್ಲಿ ಬಿಕ್ಷೆ ಬೇಡುವುದು ಹಾಗೂ ಇನ್ಯಾವುದೋ ಕೆಲಸಗಳನ್ನು ಮಾಡುತ್ತಿದ್ದ ಮಕ್ಕಳಿಗೆ ಇವರು ಪಾಠ ಬೋಧಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ: ಎನ್​ಆರ್​ಐಗಳಿಗೆ ನೆಲೆಸಿರುವ ದೇಶದಿಂದಲೇ ಮತಚಲಾಯಿಸಲು ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್​

ಆಂಧ್ರಪ್ರದೇಶ ಮತ್ತು ಬೆಂಗಳೂರು ದೊಡ್ಡ ದೊಡ್ಡ ಪಟ್ಟಣಗಳಿಂದ ಆಗಮಿಸಿರುವ ಅಲೆಮಾರಿಗಳು ಶಿಕ್ಷಣದಿಂದ ಸಂಪೂರ್ಣವಾಗಿ ವಂಚಿತರಾಗಿರುವುದಲ್ಲದೇ ತಮ್ಮ ಮಕ್ಕಳಿಗೂ ಶಿಕ್ಷಣ ಬಹು ದೂರವಾಗಿದೆ. ಉಪನ್ಯಾಸಕಿಯರಾದ ಜಿ‌ ಜ್ಯೋತಿ ಮತ್ತು ನಿಲುಫರ್ ಮಕ್ಕಳಿಗೆ ಮೊದಲಿಗೆ ತಮ್ಮ ಮಾತೃ ಭಾಷೆ ಕನ್ನಡದಲ್ಲಿಯೇ ಪಾಠ ಮಾಡಿ, ನಂತರ ಇಂಗ್ಲೀಷ್​ನಲ್ಲೂ ಪಾಠ ಪ್ರವಚನ ಮಾಡಿದ್ದಾರೆ.

ಈ ಸಂಬಂಧ ಉಪನ್ಯಾಸಕಿ ಜ್ಯೋತಿ ಮಾತನಾಡಿ, ಮಕ್ಕಳು ಖುಷಿಯಾಗಿಯೇ ಶಿಕ್ಷಣವನ್ನು ಕಲಿಯುತ್ತಿದ್ದಾರೆ. ನಾವು ಒಂದು ತಿಂಗಳು ಬೇಸಿಗೆ ಶಿಬಿರ ನಡೆಸುತ್ತೇವೆ. ಪ್ರತಿದಿನ ಶಿಕ್ಷಣವನ್ನು ಹೇಳಿ ಕಲಿಸುತಿದ್ದೇವೆ. ಅವರಿಗೆ ಸರಳವಾಗಿ ಹೇಳಿ ಕೊಡುತ್ತಿದ್ದೇವೆ ಎನ್ನುತ್ತಿದ್ದಾರೆ.

ಇದನ್ನೂ ಓದಿ : ಆಟದ ಗೊಂಬೆಯೇ ಟೀಚರ್! ಮಕ್ಕಳಿಗೆ ಪಾಠ ಹೇಳಿಕೊಡುತ್ತೆ ಈ 'ಶಿಕ್ಷಾ' ರೋಬೋ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.