ಮೈಸೂರು: ಬೃಹತ್ ಗಾತ್ರದ ಮರವೊಂದು ನೆಲಕ್ಕುರುಳಿದ ಪರಿಣಾಮ, ಮೂರು ಕಾರುಗಳು ಜಖಂ ಆಗಿರುವ ಘಟನೆ ನಗರದ ಕೆ.ಆರ್. ಮೊಹಲ್ಲಾದ ರಾಮವಿಲಾಸ ರಸ್ತೆಯಲ್ಲಿ ನಡೆದಿದೆ.
ಪಾರ್ಕಿಂಗ್ ಸ್ಥಳದಲ್ಲಿ ಈ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಸಾರ್ವಜನಿಕರ ಓಡಾಟ ಇಲ್ಲದ್ದರಿಂದ ಅನಾಹುತ ತಪ್ಪಿದೆ.
ಸ್ಥಳಕ್ಕೆ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ರಾಮವಿಲಾಸ ರಸ್ತೆಯಲ್ಲಿನ ಸಂಚಾರ ಬಂದ್ ಮಾಡಿಸಿದ್ದರು. ಮರ ತೆರವು ಕಾರ್ಯಾಚರಣೆ ಬಳಿಕ ಸಂಚಾರಕ್ಕೆ ಅನುವು ಮಾಡಿಕೊಟ್ಟರು.