ಮೈಸೂರು: ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರ ಕಾಳಜಿಯಿಂದ ಹೆಬ್ಬಾಳು ಕೈಗಾರಿಕಾ ಪ್ರದೇಶದ ಕೆರೆಗೆ ಮರುಜೀವ ಬಂದಿತ್ತು. ಆದರೆ ಬೇಸಿಗೆ ಹಾಗೂ ಅಂತರ್ಜಲ ಕಡಿಮೆಯಾಗಿ ನೀರಿಲ್ಲದೆ ಕೆರೆ ಖಾಲಿ ಖಾಲಿಯಾಗಿದೆ.
ಹೌದು, ಬೇಸಿಗೆಯ ಬಿಸಿಲಿನಿಂದ ಕೆರೆಗಳಲ್ಲಿರುವ ನೀರು ಆವಿಯಾಗುತ್ತಿರುವ ಜೊತೆಗೆ ಹಲವಾರು ಕೆರೆಗಳು ಬತ್ತಿಹೋಗಿವೆ. ಈ ನಡುವೆ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಲಕ್ಷ್ಮಿಕಾಂತ ದೇವಸ್ಥಾನದ ಕಲ್ಯಾಣಿಯೆಂದೇ ಖ್ಯಾತಿಗಳಿಸಿರುವ 'ಹೆಬ್ಬಾಳು ಕೆರೆ' ಬೇಸಿಗೆಯಿಂದ ಬರಡಾಗುತ್ತಿದೆ. ಕೆರೆಯ ಸೌಂದರ್ಯ ನೋಡಿದ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಅವರು ಇಷ್ಟೊಂದು ಸೊಗಸಾಗಿದೆ ಎಂದು ಕೆರೆಯ ಅಭಿವೃದ್ಧಿಗೆ ಲಕ್ಷ ದೇಣಿಗೆ ನೀಡಿದ್ದರು. ಆದ್ರೆ ಇದೀಗ ಬೇಸಿಗೆಯಿಂದ ಕೆರೆ ಬತ್ತಿ ಹೋಗುತ್ತಿದ್ದು, ಪಾಚಿ ಬೆಳೆಯುತ್ತಿದೆ.
ಮಳೆ ನೀರು ಕೆರೆಯಲ್ಲಿಯೇ ಸಂರಕ್ಷಣೆಯಾಗುವಂತೆ ಅಧಿಕಾರಿಗಳು ಹೊಸ ಆಲೋಚನೆ ಮಾಡಿದ್ರೆ ಹೆಬ್ಬಾಳಿನ ಕೈಗಾರಿಕಾ ಪ್ರದೇಶಕ್ಕೆ ಮತ್ತಷ್ಟು ಸೌಂದರ್ಯ ಬರುತ್ತದೆ.