ಮೈಸೂರು: ಕದ್ದಿದ್ದ ರಾಯಲ್ ಎನ್ಫೀಲ್ಡ್ ಬೈಕ್ನಲ್ಲಿ ಸರಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ನಂಜನಗೂಡು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೀಗೆ ಬಂಧಿತ ಆರೋಪಿ ಚಂದನ್ (21) ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಕೆಲಸ ಮಾಡುತ್ತಿದ್ದು, ಜೈಪುರ ಗ್ರಾಮದ ಬಳಿ ರಾಯಲ್ ಎನ್ಫೀಲ್ಡ್ ಬೈಕ್ ಕದ್ದಿದ್ದಾನೆ. ಇದೆ ಬೈಕ್ ಮೂಲಕ ಒಂಟಿ ಮಹಿಳೆಯರ ಚಿನ್ನಾಭರಣವನ್ನು ಕದಿಯುತ್ತಿದ್ದನು.
ಆರೋಪಿ ನಂಜನಗೂಡು, ಹುಲ್ಲಳ್ಳಿ ಹಾಗೂ ಮೈಸೂರು ಗ್ರಾಮಂತರ ಪ್ರದೇಶದಲ್ಲಿ ಕಳ್ಳತನ ಮಾಡುತ್ತಿರುವುದರ ಬಗ್ಗೆ ಪೊಲೀಸರಿಗೆ ದೂರು ಬಂದಿದ್ದವು. ಪ್ರಕರಣಗಳ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ್ರು.
ಆರೋಪಿ ಕದ್ದ ಚಿನ್ನಾಭರಣವನ್ನು ಸುಧಾರಾಣಿ ಎಂಬುವವರಿಗೆ ಮಾರಟ ಮಾಡುತ್ತಿದ್ದನು. ಸುಧಾರಾಣಿಯನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಚಂದನ್ಗೆ ಸಹಾಯ ಮಾಡುತ್ತಿದ್ದ ಮಹೇಶ್ ಎಂಬಾತ ಪರಾರಿಯಾಗಿದ್ದು, ಪೊಲೀಸರು ಬಲೆ ಬಿಸಿದ್ದಾರೆ.
ಬಂಧಿತ ಆರೋಪಿಯಿಂದ 64 ಗ್ರಾಂ ತೂಕದ 3 ಚಿನ್ನದ ಸರ ಹಾಗೂ ಕದ್ದಿದ್ದ ರಾಯಲ್ ಎನ್ಪೀಲ್ಡ್ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.