ಮೈಸೂರು: ನಂಜನಗೂಡು ತಾಲೂಕಿನ ಅಳಗಂಚಿ ಗ್ರಾಮದಲ್ಲಿರುವ ಬಣ್ಣಾರಿ ಅಮ್ಮನ್ ಡಿಸ್ಟಲರಿ ಘಟಕ ಹೊರ ಬಿಡುತ್ತಿರುವ ತ್ಯಾಜ್ಯದ ನೀರು ಗ್ರಾಮಸ್ಥರ ಆರೋಗ್ಯ ಹಾಗೂ ಬೆಳೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇದರಿಂದ 8 ಗ್ರಾಮಸ್ಥರು ಹಾಗೂ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೂಡಲೇ ಘಟಕವನ್ನು ಮುಚ್ಚಬೇಕು ಎಂದು ವಿವಿಧ ರೈತಪರ ಸಂಘಟನೆಗಳು, ಗ್ರಾಮಸ್ಥರು ಅನಿರ್ಧಿಷ್ಟಾವಧಿ ಪ್ರತಿಭಟನೆ ಕೈಗೆತ್ತಿಕೊಂಡಿದ್ದಾರೆ.
ಒಬ್ಬರ ಲಾಭಕ್ಕಾಗಿ ಸಾವಿರಾರು ಜನರನ್ನು ಸಂಕಷ್ಟಕ್ಕೆ ದೂಡುವುದು ಯಾವ ನ್ಯಾಯ? ಇಂಥ ನೀರನ್ನು ಅವರು ಕುಡಿದು ತೋರಿಸಲಿ. ಅರ್ಧಕ್ಕಿಂತ ಹೆಚ್ಚು ಕುಟುಂಬಗಳು ಕೃಷಿ, ಕೂಲಿ ಕಾರ್ಮಿಕರೇ ಆಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಹೀಗೇ ಮುಂದುವರೆದರೆ 8 ಗ್ರಾಮಗಳ ಜನರ ಆರೋಗ್ಯದ ಜತೆಗೆ ಬದುಕು ಬೀದಿ ಪಾಲಾಗುತ್ತದೆ. ಇಲ್ಲಿನ ಗ್ರಾಮೀಣ ಸೊಗಡು, ಸಂಸ್ಕೃತಿಯು ಅಳಿವಿನಂಚಿಗೆ ಸರಿಯುತ್ತದೆ. ನಮ್ಮ ಬೇಡಿಕೆ ಈಡೇರಿಸುವವರೆಗೂ ಅನಿರ್ಧಿಷ್ಟಾವಧಿ ಹೋರಾಟವನ್ನು ಕೈಬಿಡುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.