ಮೈಸೂರು : ದಿನೇದಿನೆ ಮೈಸೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ರೂ ಆಶಾದಾಯಕ ಬೆಳವಣಿಗೆಯೂ ಇವತ್ತು ನಡೆದಿದೆ. ಇಂದು 7 ಮಂದಿ ಕೊರೊನಾ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಗುಣಮುಖರಾದ 7 ಮಂದಿಯಲ್ಲಿ ಆರು ಜನರು ಜ್ಯುಬಿಯಂಟ್ ಕಾರ್ಖಾನೆ ನೌಕರರಾಗಿದ್ದಾರೆ. ಮತ್ತೊಬ್ಬ ವಿದೇಶದಿಂದ ಬಂದವರಾಗಿದ್ದಾರೆ. ಇದೀಗ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 45 ರಿಂದ 38ಕ್ಕೆ ಇಳಿಕೆಯಾಗಿದೆ.
ಸೋಂಕಿನಿಂದ ಗುಣಮುಖರಾದವರು ಜಿಲ್ಲಾಡಳಿತಕ್ಕೆ ಧನ್ಯವಾದ ತಿಳಿಸಿದ್ದಾರೆ. ಈ ಏಳು ಮಂದಿ 14 ದಿನಗಳ ಕಾಲ ಕ್ವಾರಂಟೈನ್ನಲ್ಲಿದ್ದು, ಆನಂತರ ಮನೆಗೆ ತೆರಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಮಾಹಿತಿ ನೀಡಿದ್ದಾರೆ.