ಮೈಸೂರು: ನೀರು ತುಂಬಿದ ಬಕೆಟ್ಗೆ ಬಿದ್ದು 2 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ತರಿಕಲ್ಲು ಗ್ರಾಮದಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ತರಿಕಲ್ಲು ಗ್ರಾಮದ ಸುಂದರ್ ರಾಜ್ ಅವರ 2 ವರ್ಷದ ಮಗು ಸಮರ್ಥ ಮನೆ ಒಳಗಡೆ ಆಟವಾಡುತ್ತಿದ್ದಾಗ ಮನೆಯವರು ಬೇರೆ ಕೆಲಸದಲ್ಲಿ ಮಗ್ನರಾಗಿದ್ದರು. ಈ ಮಗು ಬಚ್ಚಲು ಮನೆಯ ಹತ್ತಿರ ಹೋಗಿ ನೀರು ತುಂಬಿದ ಬಕೆಟ್ಗೆ ಆಯತಪ್ಪಿ ಬಿದ್ದು ಸಾವನ್ನಪ್ಪಿದೆ.
ಮಗು ಕಾಣದಿದ್ದಾಗ ಮನೆಯವರು ಎಲ್ಲ ಕಡೆ ಹುಡುಕಿದಾಗ ಮಗು ನೀರು ತುಂಬಿದ್ದ ಬಕೆಟ್ನಲ್ಲಿ ಮುಳುಗಿ ಸಾವನ್ನಪ್ಪಿರುವುದು ಕಂಡುಬಂದಿದೆ. ಸದ್ಯ ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.
ಇದನ್ನೂ ಓದಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರಿ ಮಳೆ; ಗುಡ್ಡ ಕುಸಿತ, ಮನೆಗಳಿಗೆ ಹಾನಿ