ETV Bharat / state

ಮೈಸೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣ: ಆರೋಪಿಗಳ ಬಂಧಿಸಿದ ಪೊಲೀಸರಿಗೆ 2 ಲಕ್ಷ ಬಹುಮಾನ - ಆರೋಪಿಗಳ ಬಂಧಿಸಿದ ಪೊಲೀಸರಿಗೆ 2 ಲಕ್ಷ ಬಹುಮಾನ

ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿದ ಪೊಲೀಸ್ ತಂಡಕ್ಕೆ 2 ಲಕ್ಷ ಬಹುಮಾನವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹಾಗೂ ಪೊಲೀಸ್ ಆಯುಕ್ತಾರಾದ ಡಾ. ಚಂದ್ರಗುಪ್ತ ಅವರ ಸಮ್ಮುಖದಲ್ಲಿ ಹಸ್ತಾಂತರಿಸಿದರು.

ಪೊಲೀಸರಿಗೆ 2 ಲಕ್ಷ ಬಹುಮಾನ
ಪೊಲೀಸರಿಗೆ 2 ಲಕ್ಷ ಬಹುಮಾನ
author img

By

Published : Aug 31, 2021, 8:52 PM IST

ಮೈಸೂರು: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಅಧ್ಯಕ್ಷರು ಹಾಗೂ ಮಂಗಳೂರಿನ ನವೋದಯ ಗ್ರಾಮ ವಿಕಾಸ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಮೈಸೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಭೇದಿಸಿದ ಪೊಲೀಸ್​ ತಂಡಕ್ಕೆ 2 ಲಕ್ಷ ಬಹುಮಾನ ನೀಡಿದ್ದಾರೆ.

ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿದ ಪೊಲೀಸ್ ತಂಡಕ್ಕೆ 2 ಲಕ್ಷ ಬಹುಮಾನವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹಾಗೂ ಪೊಲೀಸ್ ಆಯುಕ್ತಾರಾದ ಡಾ. ಚಂದ್ರಗುಪ್ತ ಅವರ ಸಮ್ಮುಖದಲ್ಲಿ ಹಸ್ತಾಂತರಿಸಿದರು.

ಮೈಸೂರಿನಲ್ಲಿ ಅಪರಾಧವೆಸೆಗಿದರೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ ಎಂಬ ಸಂದೇಶವನ್ನು ನಮ್ಮ ಪೊಲೀಸರು ನೀಡಿದ್ದಾರೆ. ಇದಕ್ಕಾಗಿ ಮಂಗಳೂರಿಂದ ಬಂದಿರುವ ನವೋದಯ ಗ್ರಾಮ ವಿಕಾಸ ಚಾರಿಟಬಲ್ ಟ್ರಸ್ಟ್‌ನ ಪದಾಧಿಕಾರಿಗಳು ಪೊಲೀಸರಿಗೆ ಅಭಿನಂದಿಸಿ, 2 ಲಕ್ಷ ರೂ. ನಗದು ಬಹುಮಾನ ನೀಡಿದ್ದಾರೆ ಎಂದು ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.

ಇದನ್ನೂ ಓದಿ : ಯಾದಗಿರಿ: ಗಂಡ ಮಾಡಿದ ಸಾಲಕ್ಕೆ ಹೆಂಡತಿ ಒತ್ತೆಯಾಳಾಗಿರಿಸಿಕೊಂಡ ಖಾಸಗಿ ಫೈನಾನ್ಸ್​.!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.