ಮೈಸೂರು : ಮೈಸೂರಿನಲ್ಲಿಂದು 169 ಹೊಸ ಕೊರೊನಾ ವೈರಸ್ ಸೋಂಕು ತಗುಲಿರುವ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 47,201ಕ್ಕೇರಿದೆ.
ಇಂದು 149 ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಮೈಸೂರಿನಲ್ಲಿ ಇದುವರೆಗೂ 44,175 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,073 ಇದೆ.
ಮೈಸೂರಿನಲ್ಲಿಂದು ಇಬ್ಬರು ಕೊರೊನಾ ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ 953 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ.
ಚಾಮರಾಜನಗರದಲ್ಲಿ 90 ಸಾವಿರ ದಾಟಿದ ಕೊರೊನಾ
ಚಾಮರಾಜನಗರ : ಜಿಲ್ಲೆಯಲ್ಲಿಂದು 32 ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 5884ಕ್ಕೆ ಏರಿಕೆಯಾಗಿದೆ.
ಇಂದು 62ಮಂದಿ ಗುಣಮುಖರಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 292ಕ್ಕೆ ಇಳಿಕೆಯಾಗಿದೆ. 45 ಮಂದಿ ಸೋಂಕಿತರು ಐಸಿಯುನಲ್ಲಿದ್ದು 135 ಮಂದಿ ಹೋಂ ಐಸೋಲೇಷನ್ ನಲ್ಲಿದ್ದಾರೆ.
416 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ. ಜಿಲ್ಲೆಯ ಒಟ್ಟು ಪರೀಕ್ಷೆಗಳ ಸಂಖ್ಯೆ ಇಂದು 90 ಸಾವಿರ ದಾಟಿದೆ. ಚಾಮರಾಜನಗರ ತಾಲೂಕಿನ ಕಸ್ತೂರು ಗ್ರಾಮದ 80 ವರ್ಷದ ಮಹಿಳೆ ಕಳೆದ 21 ರಿಂದ ಹೋಂ ಐಸೋಲೇಷನ್ ನಲ್ಲಿದ್ದು 27 ರಂದು ಮೃತಪಟ್ಟಿದ್ದಾರೆ.