ಮೈಸೂರು: ಬಾಲಕನೊಬ್ಬ ಫ್ಯಾನ್ ಕುಣಿಕೆಗೆ ಪೈಪ್ ಹಾಕಿಕೊಂಡು ಉಯ್ಯಾಲೆ ಆಡುತ್ತಿರುವಾಗ ಆಕಸ್ಮಿಕವಾಗಿ ಕೊರಳಿಗೆ ಪೈಪ್ ಸುತ್ತಿಕೊಂಡು ಮೃತಪಟ್ಟಿರುವ ಘಟನೆ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮುಭಾಷಿರ್ (13) ಮೃತಪಟ್ಟ ಬಾಲಕ. ನಾಸಿರ್ ಖಾನ್ ಎಂಬುವವರ ಮಗನಾಗಿದ್ದು, ಈ ಬಾಲಕ ಫ್ಯಾನ್ ಕುಣಿಕೆಗೆ ಪೈಪ್ ಹಾಕಿಕೊಂಡು ಉಯ್ಯಾಲೆ ಆಡುವಾಗ ಆಕಸ್ಮಿಕವಾಗಿ ಪೈಪ್ ಕುತ್ತಿಗೆಗೆ ಸುತ್ತಿಕೊಂಡು ಮೃತಪಟ್ಟಿದ್ದಾನೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.