ಮೈಸೂರು : ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್‌ನ ಮೊದಲನೇ ಹಂತದ ಚುನಾವಣೆಯಲ್ಲಿ 123 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ 6,165 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಹುಣಸೂರು ತಾಲೂಕಿನ 41 ಗ್ರಾ.ಪಂ.ಗಳ 595 ಸ್ಥಾನಗಳ ಪೈಕಿ 40 ಅವಿರೋಧ ಆಯ್ಕೆಯಾದ್ರೆ,1,593 ಮಂದಿ ಕಣದಲ್ಲಿದ್ದಾರೆ. ಕೆ ಆರ್ ನಗರ 34 ಗ್ರಾ.ಪಂ.ಗಳ 562 ಸ್ಥಾನಗಳ ಪೈಕಿ 31 ಮಂದಿ ಅವಿರೋಧ ಆಯ್ಕೆಯಾದ್ರೆ, 1,495 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ 34 ಗ್ರಾ.ಪಂ.ಗಳ 549 ಸ್ಥಾನಗಳ ಪೈಕಿ 27 ಮಂದಿ ಅವಿರೋಧ ಆಯ್ಕೆಯಾಗಿದ್ದಾರೆ. 1,408 ಮಂದಿ ಸರ್ಧಾ ಕಣದಲ್ಲಿದ್ದಾರೆ. ಹೆಚ್ ಡಿ ಕೋಟೆ ತಾಲೂಕಿ 26 ಗ್ರಾ.ಪಂ.ಗಳ 407 ಸ್ಥಾನಗಳಲ್ಲಿ 20 ಮಂದಿ ಅವಿರೋಧ ಆಯ್ಕೆಯಾದ್ರೆ,1106 ಮಂದಿ ಸ್ಪರ್ಧೆಯಲ್ಲಿದ್ದಾರೆ.
ಸರಗೂರಿನ 13 ಗ್ರಾ.ಪಂ. ಗಳ 190 ಸ್ಥಾನಗಳ ಪೈಕಿ 5 ಮಂದಿ ಅವಿರೋಧ ಆಯ್ಕೆಯಾಗಿದ್ದಾರೆ. 563 ಮಂದಿ ಕಣದಲ್ಲಿದ್ದಾರೆ.