ಮಂಡ್ಯ: ಕೃಷಿ ಹೊಂಡಕ್ಕೆ ಆಯತಪ್ಪಿಬಿದ್ದು ಯುವಕ ಮೃತಪಟ್ಟ ಘಟನೆ ಮಳವಳ್ಳಿ ತಾಲೂಕಿನ ಬಾಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸೋಮಶೇಖರ್ ಎಂಬುವರ ಪುತ್ರ ಎಸ್.ನಾಗೇಂದ್ರಕುಮಾರ್ (29) ಮೃತ.
ದನ ಕಾಯುತ್ತಿದ್ದ ನಾಗೇಂದ್ರಕುಮಾರ್ ಅದೇ ಗ್ರಾಮದ ಚೌಡೇಗೌಡರವರಿಗೆ ಸೇರಿದ ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು, ಈಜು ಬಾರದೇ ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಶವವನ್ನು ಹೊರತೆಗೆದರು. ಬಳಿಕ ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರುಸುದಾರರಿಗೆ ಶವ ಒಪ್ಪಿಸಲಾಯಿತು. ಈ ಸಂಬಂಧ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಾಗಿದೆ.