ಮಂಡ್ಯ: ಕೊರೊನಾ ಸೋಂಕು ಇರಬಹುದು ಎಂಬ ಕಾರಣಕ್ಕೆ ಶವದ ಬಳಿ ಹೋಗಲು ಜನರು ಹೆದರುತ್ತಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶೆಟ್ಟಹಳ್ಳಿ ಗ್ರಾಮದ ಶಿವಮ್ಮ (55) ಮೃತ ಮಹಿಳೆ. ಆ ಮೃತ ದೇಹ ಮನೆಯ ಜಗುಲಿ ಮೇಲೆ ಅನಾಥವಾಗಿ ಬಿದ್ದಿದೆ. ಕೊರೊನಾ ಇರಬಹುದು ಎಂದು ಶವದ ಬಳಿ ಜನರು ಹೋಗಲು ಹಿಂದೇಟು ಹಾಕುತ್ತಿದ್ದಾರೆ.
ಶಿವಮ್ಮ ಏ.19ರಂದು ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದರು. ಆದರೆ ಇಲ್ಲಿವರೆಗೂ ಕೋವಿಡ್ ವರದಿ ಬಂದಿಲ್ಲ. ಇಂದು ಬೆಳಗ್ಗೆ ಆ ಮಹಿಳೆ ಉಸಿರಾಟದ ಸಮಸ್ಯೆ ಇತ್ತು. ಹೀಗಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೊರಟಿದ್ದರು. ಆದರೆ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲೇ ಶಿವಮ್ಮ ಸಾವನಪ್ಪಿದ್ದಾರೆ. ಶಿವಮ್ಮನ ಮೃತದೇಹವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಮನೆಯ ಜಗುಲಿ ಮೇಲೆ ಇಟ್ಟು ಹೋಗಿದ್ದಾರೆ.
ಕೊರೋನಾದಿಂದಾಗಿ ಮಾನವೀಯತೆ ಕೂಡಾ ಮರೆಯಾಗಿದ್ದು, ಅಂತ್ಯಸಂಸ್ಕಾರಕ್ಕೂ ಜನರು ಮುಂದೆ ಬರುತ್ತಿಲ್ಲ. ಈಕೆಗೆ ಮಕ್ಕಳಿದ್ದರು ಕೂಡ ಶವ ಅನಾಥವಾಗಿರುವುದು ದುರಂತವಾಗಿದೆ.