ಮಂಡ್ಯ: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಹೀರೆ, ಸೌತೆ, ಟೊಮೆಟೊ ಬೆಳೆಯನ್ನ ಕಾಡಾನೆಗಳು ತುಳಿದು, ತಿಂದು ಹಾಳು ಮಾಡುವ ಮೂಲಕ ರೈತರ ಬದುಕು ನಾಶ ಮಾಡಿದೆ.
ಮಂಡ್ಯದ ಮಳ್ಳವಳ್ಳಿ ತಾಲೂಕಿನ ಗೂಳಿಗೌಡನದೊಡ್ಡಿ ಶಿವಲಿಂಗಮ್ಮ ಎಂಬುವರಿಗೆ ಸೇರಿದ ಜಮೀನಿನಲ್ಲಿ ಏಳು ಕಾಡಾನೆಗಳು ಬೆಳೆಗಳನ್ನು ತಿಂದು, ತುಳಿದು ನಾಶ ಪಡಿಸಿವೆ.
ಶಿವಲಿಂಗಮ್ಮ ಮಾತನಾಡಿ, ನಾವು ವ್ಯವಸಾಯವನ್ನೆ ನಂಬಿಕೊಂಡಿದ್ದೇವೆ. ಈಗ ನಮ್ಮ ಜಮೀನಿನಲ್ಲಿ ಹೀರೆಗಿಡ, ಸೌತೆಗಿಡ ಹಾಗೂ ಟೊಮೆಟೊ ಬೆಳೆ ಬೆಳೆದಿದ್ದೇವು. ಶಿಂಶಾ ಕಾಡಿನಿಂದ ಬಂದ ಕಾಡಾನೆಗಳು ಎಲ್ಲವನ್ನೂ ನಾಶಪಡಿಸಿವೆ ಎಂದು ಅಳವು ತೋಡಿಕೊಂಡರು.
ಅರಣ್ಯ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.