ಮಂಡ್ಯ: ಅನೈತಿಕ ಸಂಬಂಧಕ್ಕೆ ಪ್ರಿಯಕರನ ಜೊತೆ ಸೇರಿ ಪತ್ನಿ ಗಂಡನನ್ನೇ ಕೊಲೆ ಮಾಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಗ್ರಾಮದಲ್ಲಿ ನಡೆದಿದೆ.
ಅರೆಕೆರೆ ಗ್ರಾಮದ ಸತೀಶ್ ಕೊಲೆಯಾದ ದುರ್ದೈವಿ ಪತಿಯಾಗಿದ್ದು, ಸತೀಶ್‌ನ ಪತ್ನಿ ಕಾವ್ಯ ಗಂಡನನ್ನೇ ಕೊಲೆ ಮಾಡಿರುವ ಹೆಂಡ್ತಿಯಾಗಿದ್ದಾಳೆ. ತನ್ನ ಪ್ರಿಯಕರ ಮಂಜನ ಜೊತೆಗಿನ ಅನೈತಿಕ ಸಂಬಂಧಕ್ಕಾಗಿ ಮಂಜನ ಸ್ನೇಹಿತ ಗುರು ಹಾಗೂ ಮತ್ತಿಬ್ಬರ ಜೊತೆ ಸೇರಿ ಪತಿಗೆ ಸ್ಕೆಚ್ ಹಾಕಿ ಕೊಲೆಗೈದು ಕೆರೆ ದಡದಲ್ಲಿ ಮಣ್ಣು ಮಾಡಿದ್ದರಂತೆ. ಶವ ಮಣ್ಣು ಮಾಡಿ ಗಂಡ ಒಂದು ವಾರದಿಂದ ನಾಪತ್ತೆಯಾಗಿರೋದಾಗಿ ನಾಟಕವಾಡಿ ಪತ್ನಿಯೇ ದೂರು ನೀಡಿದ್ದಳು. ಅನುಮಾನ ಬಂದು ಪೊಲೀಸರು ಕಾವ್ಯಳನ್ನು ವಿಚಾರಣೆ ಮಾಡಿದಾಗ ಕೊಲೆ ಮಾಡಿದ ಸತ್ಯ ಬಾಯ್ಬಿಟ್ಟಿದ್ದಾಳೆ.
ಕೃತ್ಯದಲ್ಲಿ ಭಾಗಿಯಾದ ಐವರಲ್ಲಿ ಪ್ರಿಯಕರ ಮಂಜ, ಆತನ ಸಹಚರರಾದ ಗುರು, ಅರ್ಜುನ್ನನ್ನು ಬಂಧಿಸಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಪ್ರಕರಣ ಬೇಧಿಸಿರುವ ಅರಕೆರೆ ಪೊಲೀಸರು ಇಂದು ಸ್ಥಳಕ್ಕೆ ಆರೋಪಿಗಳನ್ನು ಕರೆದೊಯ್ದು ಶವ ಹೊರ ತೆಗೆಸಿ ಪಂಚನಾಮೆ ಮಾಡಲಿದ್ದಾರೆ.