ETV Bharat / state

ಪಾಂಡವಪುರದಲ್ಲಿ ವೇದ ಚಿತ್ರದ ಆಡಿಯೋ ಬಿಡುಗಡೆ: ಭರ್ಜರಿ ಸ್ಟೆಪ್ ಹಾಕಿದ ಹ್ಯಾಟ್ರಿಕ್ ಹೀರೋ - Vedha movie

ಪುನೀತೋತ್ಸವ ಕಾರ್ಯಕ್ರಮದ ಕೊನೆಯ ದಿನವಾದ ನ.27ರಂದು ಡಾ. ಶಿವರಾಜ್ ಕುಮಾರ್ ಅಭಿನಯದ ವೇದ ಚಿತ್ರದ ಆಡಿಯೋ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗದ ಪ್ರಖ್ಯಾತ ನಟ, ನಟಿಯರು ಪಾಲ್ಗೊಂಡಿದ್ದರು.

Vedha movie audio release in Pandavapura
ಪಾಂಡವಪುರದಲ್ಲಿ ವೇದ ಚಿತ್ರದ ಆಡಿಯೋ ಬಿಡುಗಡೆ
author img

By

Published : Nov 28, 2022, 7:18 AM IST

ಮಂಡ್ಯ: ಡಾ.ಶಿವರಾಜ್ ಕುಮಾರ್ ಅವರ 125ನೇ ಸಿನಿಮಾ 'ವೇದ' ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಪಾಂಡುಪುರದಲ್ಲಿ ನಿನ್ನೆ(ಭಾನುವಾರ) ನಡೆಯಿತು. ಪುನೀತೋತ್ಸವ ಕಾರ್ಯಕ್ರಮದಲ್ಲಿ ನಿರ್ದೇಶಕ ಹರ್ಷ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಬರೆದಿರುವ 'ಗಿಲಕ್ಕು ಶಿವ ಗಿಲ್ಲಕ್ಕೋ, ಗಿಲ ಗಿಲ ಗಿಲಕ್ಕೋ' ಎಂಬ ಹಾಡನ್ನು ಬಿಡುಗಡೆ ಮಾಡಲಾಯಿತು.

ಪಾಂಡವಪುರದಲ್ಲಿ ವೇದ ಚಿತ್ರದ ಆಡಿಯೋ ಬಿಡುಗಡೆ

ಬಳಿಕ ವೇದಿಕೆಗೆ ಎಂಟ್ರಿಕೊಟ್ಟ ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ ಹಾಗೂ ಗೀತಾ ಶಿವರಾಜ್‌ ಕುಮಾರ್ ವೇದ ಚಿತ್ರದ ಕುರಿತು ಮಾತನಾಡಿದರು. ಈ ವೇಳೆ ನೆರದಿದ್ದ ಜನ ಅಪ್ಪು,ಅಪ್ಪು ಎಂದು ಕೂಗಿದರು. ಶಿವಣ್ಣ ಎದೆಗೆ ಕೈ ಒತ್ತಿಕೊಂಡು ಅಪ್ಪುಯಾವಾಗಲೂ ಹೃದಯದಲ್ಲಿ ಇರುತ್ತಾನೆ. ಅಪ್ಪು ಅಮಾರ ದಿಲ್ ಹೇ ಎಂದು ಭಾವುಕರಾದರು.

ಬಳಿಕ ಚಿತ್ರದ ನಿರ್ದೇಶಕ ಹರ್ಷ, ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಹಾಗೂ ನಟರು ವೇದ ಚಿತ್ರದ ಕುರಿತು ಮಾತನಾಡಿದರು. ನಂತರ ಟಗರು ಬಂತು ಟಗರು ಹಾಡಿಗೆ ಶಿವಣ್ಣ ಭರ್ಜರಿ ಸ್ಟೆಪ್ ಹಾಕಿದರು. ವೇದ ಚಿತ್ರದ ಎಲ್ಲ ನಟ- ನಟಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಪಾಂಡವಪುರದಲ್ಲಿ ಪುನೀತೋತ್ಸವ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.