ETV Bharat / state

ವೈರಮುಡಿ ಉತ್ಸವ: ಜಿಲ್ಲಾ ಖಜಾನೆಯಿಂದ ಮೇಲುಕೋಟೆಗೆ ಕಿರೀಟ ರವಾನೆ - ಜಿಲ್ಲಾ ಖಜಾನೆಯಿಂದ ಮೇಲುಕೋಟೆಗೆ ವೈರಮುಡಿ ಕಿರೀಟ ರವಾನೆ

ವೈರಮುಡಿ ಕಿರೀಟವನ್ನು ಚೆಲುವನಾರಾಯಣಸ್ವಾಮಿಗೆ ಮುಡಿಸಲು ಇಂದು ಜಿಲ್ಲಾ ಖಜಾನೆಯಿಂದ ಜಿಲ್ಲಾಧಿಕಾರಿ ಅಶ್ವಥಿ ನೇತೃತ್ವದಲ್ಲಿ ಮೇಲುಕೋಟೆಗೆ ತರಲಾಯಿತು.

Vairamudi Festival
ವೈರಮುಡಿ ಉತ್ಸವ: ಜಿಲ್ಲಾ ಖಜಾನೆಯಿಂದ ಮೇಲುಕೋಟೆಗೆ ಕಿರೀಟ ರವಾನೆ
author img

By

Published : Mar 24, 2021, 9:30 AM IST

ಮಂಡ್ಯ: ಶ್ರೀಮನ್ನಾರಾಯಣನ ಕಿರೀಟವೆಂದೇ ಖ್ಯಾತಿ ಪಡೆದಿರುವ ವೈರಮುಡಿ ಕಿರೀಟವನ್ನು ಮೇಲುಕೋಟೆ ಚೆಲುವನಾರಾಯಣಸ್ವಾಮಿಗೆ ಮುಡಿಸಲು ಇಂದು ಜಿಲ್ಲಾ ಖಜಾನೆಯಿಂದ ಜಿಲ್ಲಾಧಿಕಾರಿ ಅಶ್ವಥಿ ನೇತೃತ್ವದಲ್ಲಿ ತರಲಾಯಿತು.

ವೈರಮುಡಿ ಉತ್ಸವ: ಜಿಲ್ಲಾ ಖಜಾನೆಯಿಂದ ಮೇಲುಕೋಟೆಗೆ ಕಿರೀಟ ರವಾನೆ

ತಂತ್ರ ಸ್ವತಂತ್ರ ಪರಕಾಲ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್​​ನಲ್ಲಿ ತರಲಾಗಿದ್ದು, ಮೇಲುಕೋಟೆ ಸ್ಥಾನಿಕ ಅರ್ಚಕರು ಜಿಲ್ಲಾಧಿಕಾರಿಯವರಿಂದ ಕಿರೀಟವನ್ನು ಬರಮಾಡಿಕೊಂಡರು. ಅತ್ಯಂತ ಬೆಲೆಬಾಳುವ ಚೆಲುವನಾರಾಯಣಸ್ವಾಮಿಯ ಕಿರೀಟ ಮತ್ತು ಆಭರಣಗಳನ್ನು ಪರಕಾಲ ಮಠದ ಸ್ವಾಮೀಜಿಯವರ ವಾಹನದಲ್ಲಿ ಮೆರವಣಿಗೆ ಮೂಲಕ ತಂದು, ನಗರದ ಲಕ್ಷ್ಮೀ ಜನಾರ್ಧನ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು. ನಂತರ ಇಂಡವಾಳು, ಬ್ಯಾಡರಹಳ್ಳಿ , ಪಾಂಡುಪುರ, ಜಗ್ಗನಹಳ್ಳಿ ಮಾರ್ಗವಾಗಿ ಮೇಲುಕೋಟೆಗೆ ಕೊಂಡೊಯ್ಯಲಾಯಿತು.

ಮಾರ್ಗಮಧ್ಯೆ ಎಲ್ಲ ಗ್ರಾಮಗಳಲ್ಲೂ ಭಕ್ತಾಧಿಗಳು ಭಕ್ತಿಯಿಂದ ಪೂಜೆ ಸಲ್ಲಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶ್ವಿನಿ, ಪಾಂಡುಪುರ ಉಪವಿಭಾಗಾಧಿಕಾರಿ ಶಿವಮೂರ್ತಿ ಈ ವೇಳೆ ಉಪಸ್ಥಿತರಿದ್ದರು.

ಓದಿ: ಮರಳು ದಂಧೆಕೋರರಿಂದ ಲಂಚ ಪಡೆದ ಆರೋಪ : ತಹಶೀಲ್ದಾರ್​ ಅಮಾನತು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.