ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಅಪರಿಚಿತ ಮಹಿಳೆ ಶವ ಪತ್ತೆಯಾಗಿದೆ.
ಸುಮಾರು 35 ವರ್ಷದ ಮಹಿಳೆಯ ಮೃತದೇಹ ಇದಾಗಿದೆ. ಬೈಕ್ನಲ್ಲಿ ಮಹಿಳೆ ಕೂರಿಸಿಕೊಂಡು ಹೋಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಬೈಕ್ ಅಪಘಾತವಾಗಿದ್ದು, ಸ್ಥಳದಲ್ಲೇ ಮಹಿಳೆ ಮೃತಪಟ್ಟಿದ್ದಾಳೆ. ಹುಲಿಕೆರೆ ಗ್ರಾಮದ ಬಳಿ ಘಟನೆ ನಡೆದಿದ್ದು, ಬಲಗೈ ಮೇಲೆ ನಾಗರಾಜು ಹಾಗೂ ಎಡಗೈನಲ್ಲಿ ಹನುಮಯ್ಯ ಎಂಬ ಹಚ್ಚೆ ಗುರುತು ಇರುವುದು ಕಂಡು ಬಂದಿದೆ.
ಮಹಿಳೆಯ ವಾರಸುದಾರರ ಪತ್ತೆಗಾಗಿ ಮದ್ದೂರು ಠಾಣೆಗೆ ತಿಳಿಸುವಂತೆ ಹೇಳಿದ್ದು, ಸದ್ಯ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.