ಮಂಡ್ಯ: ಕೇಂದ್ರ ಸರ್ಕಾರ ಆತ್ಮ ನಿರ್ಭರ್ ಯೋಜನೆಯಡಿ ಮಂಡ್ಯ ಜಿಲ್ಲೆಯಲ್ಲಿ ಆಲೆಮನೆ ಪುನಶ್ಚೇತನ ಹಾಗೂ ವಿದ್ಯಾವಂತ ಯುವಕರ ಹಾಗೂ ಉದ್ಯಮಿಗಳಿಂದ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಎಂ.ಡಿ.ಸಿ.ಸಿ ಬ್ಯಾಂಕ್ನ ನೂತನ ಅಧ್ಯಕ್ಷ ಉಮೇಶ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲಾ ಕೇಂದ್ರ ಸಹಕಾರಿ (ಎಂಡಿಸಿಸಿ) ಬ್ಯಾಂಕ್ನ ವಾರ್ಷಿಕ ಸಭೆಯಲ್ಲಿ ರೈತರಿಗೆ ಅನುಕೂಲವಾಗುವಂತ ತೀರ್ಮಾನ ತೆಗೆದುಕೊಳ್ಳಲಾಗಿದೆ. ಆಲೆಮನೆ ನಿರ್ಮಾಣಕ್ಕೆ ಸಾಲ ಸೌಲಭ್ಯದ ತೀರ್ಮಾನ ಹಾಗೂ ಡಿಸಿಸಿ ಬ್ಯಾಂಕ್ ಹೊಸ ಬ್ರಾಂಚ್ ನಿರ್ಮಾಣ, ಹೊಸ ಸದಸ್ಯರಿಗೆ ಸಾಲ ನೀಡುವಂತ ವ್ಯವಸ್ಥೆ ಮಾಡಲಾಗುವುದು ಎಂದರು.
ಬ್ಯಾಂಕ್ನಲ್ಲಿ ರೈತರಿಗೆ ಅನುಕೂಲವಾಗುವಂತ ತೀರ್ಮಾನ ತೆಗೆದುಕೊಳ್ಳಲಾಗಿದೆ. ಪಾರದರ್ಶಕವಾದಂತ ಕೆಲಸ ಮಾಡಿ ಜಿಲ್ಲೆಗೆ ಗೌರವ ತರುವಂತಹ ಕೆಲಸ ಮಾಡ್ತಿದ್ದೇನೆ. ಎಂ.ಡಿ.ಸಿ.ಸಿ ಬ್ಯಾಂಕ್ ನ ಯಾವುದೇ ಭ್ರಷ್ಟಾಚಾರಕ್ಕೆ ಒಳಗಾಗದಂತೆ ಎಚ್ಚರಿಕೆ ವಹಿಸಿದ್ದೇನೆ ಎಂದು ಮಾಹಿತಿ ನೀಡಿದರು.
ಹಳೆಯ ಆಡಳಿತ ಮಂಡಳಿಗಿಂತ ಹೆಚ್ಚು ಮಂಡ್ಯ ಜಿಲ್ಲೆಗೆ ಗೌರವ ತರುವ ಕೆಲಸಗಳನ್ನ ಮಾಡುತ್ತದೆ ಎಂದು ಎಂಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷ ಉಮೇಶ್ ಭರವಸೆ ನೀಡಿದರು.