ಮಂಡ್ಯ: ಕೊರೊನಾ ಭಯದಿಂದ ಅಜ್ಜಿ ಮನೆಗೆಂದು ಬೆಂಗಳೂರಿನಿಂದ ಆಗಮಿಸಿದ್ದ ಇಬ್ಬರು ಯುವಕರು ಕೆರೆಯಲ್ಲಿ ಆಟವಾಡಲು ಹೋಗಿ ಸಾವಿಗೀಡಾದ ಘಟನೆ ನಾಗಮಂಗಲ ತಾಲೂಕಿನ ದುಮ್ಮಸಂದ್ರ ಕೆರೆಯಲ್ಲಿ ನಡೆದಿದೆ.
ಬೆಂಗಳೂರಿನಿಂದ ವಡೇರಹಳ್ಳಿಯ ಅಜ್ಜಿ ಮನೆಗೆ ಬಂದಿದ್ದ ಭಾಸ್ಕರ್ (21) ಹಾಗೂ ಅಭಿಷೇಕ್ (18) ಸಾವಿಗೀಡಾಗಿದ್ದು, ಮತ್ತೊಬ್ಬ ಯುವಕ ಶಿವರಾಜು ಎಂಬಾತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ತೆಪ್ಪದ ಮೂಲಕ ಕೆರೆಯ ಮಧ್ಯೆ ತೆರಳಿದ್ದ ವೇಳೆ ತೆಪ್ಪ ಮಗುಚಿದ ಕಾರಣದಿಂದಾಗಿ ಇಬ್ಬರು ಸಾವಿಗೀಡಾಗಿದ್ದು, ಮತ್ತೊಬ್ಬ ಪ್ರಾಣಾಪಾಯದಿಂದ ಪಾರಾಗಿದ್ದಾನೆ.