ETV Bharat / state

ಮಂಡ್ಯದಲ್ಲಿ ಬ್ಲಾಕ್​​ ಫಂಗಸ್​​ಗೆ ಮತ್ತೆ ಇಬ್ಬರು ಬಲಿ - Mandya

ಮಂಡ್ಯ ಜಿಲ್ಲೆಯಲ್ಲಿ ಬ್ಲಾಕ್​​ ಫಂಗಸ್​​ ಭೀತಿ ಹೆಚ್ಚಾಗುತ್ತಿದ್ದು, ಇಂದು ಇಬ್ಬರು ಬಲಿಯಾಗಿದ್ದಾರೆ.

mandya
ಮಂಡ್ಯ
author img

By

Published : Jun 24, 2021, 9:14 AM IST

ಮಂಡ್ಯ: ಜಿಲ್ಲೆಯಲ್ಲಿ ಬ್ಲಾಕ್​​ ಫಂಗಸ್‌ಗೆ ಮತ್ತೆ ಇಬ್ಬರು ಬಲಿಯಾಗಿದ್ದಾರೆ. ಈವರೆಗೆ ಐದು ಮಂದಿ ಈ ಖಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ಮಿಮ್ಸ್ ನಿರ್ದೇಶಕ ಡಾ.ಎಂ.ಆರ್‌.ಹರೀಶ್‌ ತಿಳಿಸಿದರು.

ಈವರೆಗೆ ಜಿಲ್ಲೆಯಲ್ಲಿ 20 ಬ್ಲಾಕ್​​ ಫಂಗಸ್ ಪ್ರಕರಣಗಳು ಪತ್ತೆಯಾಗಿವೆ. ಇವುಗಳ ಪೈಕಿ ನಾಲ್ವರು ಗುಣಮುಖರಾಗಿದ್ದಾರೆ. ಉಳಿದಂತೆ 11 ಸಕ್ರಿಯ ಪ್ರಕರಣಗಳಿವೆ ಎಂದರು.

ಕೊರೊನಾ 3ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಪರಿಣಾಮ ಬೀರುತ್ತದೆ ಎಂಬ ತಜ್ಞರ ಮಾಹಿತಿ ಆಧರಿಸಿ ಮಕ್ಕಳಿಗಾಗಿಯೇ ತೀವ್ರ ನಿಗಾ ಘಟಕಗಳನ್ನು ಸ್ಥಾಪಿಸಲಾಗಿದೆ. ಈಗಾಗಲೇ 44 ಆಕ್ಸಿಜನ್ ಹಾಸಿಗೆಗಳನ್ನು ಅಳವಡಿಸಲಾಗಿದೆ. ಮುಂದಿನ 2,100 ಹಾಸಿಗೆಗಳಿಗೆ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ.

ಆಮ್ಲಜನಕ ಸಾಗಿಸುವ ಕೊಳವೆ ಮಾರ್ಗ ಅಳವಡಿಕೆ ಕಾರ್ಯ ನಡೆಯುತ್ತಿದೆ. ಕೊಯಮತ್ತೂರಿನಿಂದ ಕಚ್ಚಾ ಸಾಮಗ್ರಿ ಒಂದೆರಡು ದಿನಗಳಲ್ಲಿ ಬರಲಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: Black fungus: ಗುಣಮುಖರಿಗಿಂತ ಮೃತಪಟ್ಟವರ ಪ್ರಮಾಣವೇ ಹೆಚ್ಚು- ಇಲ್ಲಿಯವರೆಗೆ 2,856 ಕೇಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.