ಮಂಡ್ಯ: ಬೈಕ್‌ಗಳ ನಡುವೆ ಮುಖಾಮುಖಿಯಾದ ಪರಿಣಾಮ ಓರ್ವ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಉಳಿದಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮದ್ದೂರು ತಾಲೂಕಿನ ಶಿವಪುರದ ಸೇತುವೆ ಬಳಿ ನಡೆದಿದೆ.
ಸೂರ್ಯ(18) ಎಂಬಾತ ಮೃತ ಬೈಕ್ ಸವಾರ. ದೇಶಹಳ್ಳಿ ಗ್ರಾಮದ ದಾಸ (30) ಹಾಗೂ ಯೋಗ ಎಂಬುವರಿಗೆ ಗಂಭೀರ ಗಾಯವಾಗಿ, ಅವರನ್ನ ಮಿಮ್ಸ್‌ಗೆ ದಾಖಲು ಮಾಡಲಾಗಿದೆ.
ಸಂಬಂಧಿಕರ ಆಕ್ರೋಶ :
ಆಸ್ಪತ್ರೆಗೆ ಗಾಯಾಳುಗಳನ್ನು ಸಂಬಂಧಿಕರೇ ತಂದಿದ್ದು, ಆ್ಯಂಬುಲೆನ್ಸ್ ಡ್ರೈವರ್ ಇರದ ಕಾರಣ ಅದನ್ನ ಜಖಂ ಮಾಡಲೂ ಸಂಬಂಧಿಕರು ಮುಂದಾಗಿದ್ದರು. ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶ ಮಾಡಿದ ಪೊಲೀಸರು, ಗಾಯಾಳು ಸಂಬಂಧಿಗಳ ಮೇಲೆ ಲಘು ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಮದ್ದೂರು ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.