ಮಂಡ್ಯ: ಜಿಲ್ಲೆಯಲ್ಲಿ ಕಲ್ಲುಗಣಿಗಾರರ ಲಾಬಿಗೆ ಮಣಿದ ಸರ್ಕಾರ ಕನ್ನಂಬಾಡಿ ಕಟ್ಟೆ 20 ಕಿ.ಮೀ. ವ್ಯಾಪ್ತಿಯಲ್ಲಿ ಟ್ರಯಲ್ ಬ್ಲಾಸ್ಟ್ (ಪ್ರಾಯೋಗಿಕ ಸ್ಫೋಟ)ಕ್ಕೆ ಅನುಮತಿ ನೀಡಿದೆ.
ಇಂದು ಮತ್ತು ನಾಳೆ ಕನ್ನಂಬಾಡಿ ಅಣೆಕಟ್ಟು ಸುತ್ತಲಿನ ಪ್ರದೇಶದಲ್ಲಿ ಟ್ರಯಲ್ ಬ್ಲಾಸ್‌ಗೆ ಅನುಮತಿ ನೀಡಲಾಗಿದೆ. ಪುಣೆಯ ಹಿರಿಯ ಭೂ ವಿಜ್ಞಾನಿಗಳ ತಂಡದಿಂದ ಟ್ರಯಲ್ ಬ್ಲಾಸ್ಟ್ ನಡೆಯಲಿದೆ. ವಿಜ್ಞಾನಿಗಳ ಟ್ರಯಲ್ ಬ್ಲಾಸ್ಟ್ ವರದಿ ಆಧರಿಸಿ ಕನ್ನಂಬಾಡಿ ಅಣೆಕಟ್ಟು ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ಭವಿಷ್ಯ ನಿರ್ಧಾರ ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಹಿಂದೆ ಪ್ರಾಕೃತಿಕ ವಿಪತ್ತು ಸಂಶೋಧನಾ ಕೇಂದ್ರ ಈ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆಯಿಂದ ಡ್ಯಾಂಗೆ ಅಪಾಯವಿದೆ ಎಂದು ವರದಿ ನೀಡಿತ್ತು. ಇದರಿಂದ ಡ್ಯಾಂನ 20 ಕಿ.ಮೀ.ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಶಾಶ್ವತ ನಿಷೇಧ ಹೇರುವಂತೆ ಸರ್ಕಾರಕ್ಕೆ ಒತ್ತಡ ಹೇರಿದ್ದರು. ಆದರೀಗ ಕಲ್ಲು ಗಣಿ ಮಾಲೀಕರ ಲಾಬಿಯ ಒತ್ತಡದಿಂದ ಸರ್ಕಾರ ಭೂ ವಿಜ್ಞಾನಿಗಳ ವರದಿ ಪಡೆಯಲು ಮುಂದಾಗಿದೆ ಎನ್ನಲಾಗ್ತಿದೆ.