ETV Bharat / state

ಜೆಡಿಎಸ್ ಭದ್ರಕೋಟೆ ಒಡೆದಿದೆ, ಛಿದ್ರ ಮಾಡೋದೊಂದೇ ಬಾಕಿ: ಸಂಸದೆ ಸುಮಲತಾ ಅಂಬರೀಶ್​ - ಬಿಜೆಪಿಗೆ ಬೆಂಬಲ ಘೋಷಣೆ ಬೆನ್ನಲ್ಲೇ ಸಂಸದೆ ಸುಮಲತಾ ಅಲರ್ಟ್

ಮದ್ದೂರಿನ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಸಭೆ- ಜೆಡಿಎಸ್ ಭದ್ರಕೋಟೆ ಗೋಡೆ ಒಡೆದೋಗಿದೆ- ನನ್ನ ಸ್ವಂತ ಊರು ಮದ್ದೂರಿನಲ್ಲಿ ಬಿಜೆಪಿ ಬಾವುಟ ಹಾರಿಸುವುದೊಂದೇ ನನ್ನ ಆಸೆ -ಸಂಸದೆ ಸುಮಲತಾ ಅಂಬರೀಶ್​ ಹೇಳಿಕೆ

MP Sumalatha spoke.
ಸಂಸದೆ ಸುಮಲತಾ ಮಾತನಾಡಿದರು.
author img

By

Published : Mar 26, 2023, 4:36 PM IST

Updated : Mar 26, 2023, 4:45 PM IST

ಸಂಸದೆ ಸುಮಲತಾ ಅಂಬರೀಶ್​

ಮಂಡ್ಯ: ಒಡೆದಿರುವ ಜೆಡಿಎಸ್ ಭದ್ರಕೋಟೆಯನ್ನು ಛಿದ್ರ ಮಾಡೋದೊಂದೇ ಬಾಕಿ ಎಂದು ದಳಪತಿಗಳಿಗೆ ಸಂಸದೆ ಸುಮಲತಾ ಅಂಬರೀಶ್​ ಟಕ್ಕರ್ ನೀಡಿದ್ದಾರೆ. ಬಿಜೆಪಿಗೆ ಬೆಂಬಲ ಘೋಷಣೆ ಬೆನ್ನಲ್ಲೇ ಸಂಸದೆ ಸುಮಲತಾ ಅಲರ್ಟ್ ಆಗಿದ್ದಾರೆ. ಜೆಡಿಎಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ಮಾಸ್ಟರ್ ಪ್ಲಾನ್ ಹೆಣೆಯುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆ ಛಿದ್ರ ಮಾಡಬೇಕೆಂದು ಪಣ ತೊಟ್ಟಿದ್ದು, ಈಗಾಗಲೇ ಮಂಡ್ಯದಲ್ಲಿ ಜೆಡಿಎಸ್ ಮಣ್ಣು ಮುಕ್ಕಿಸಲು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸಂಸದೆ ಸುಮಲತಾ ಸೂಚನೆ ನೀಡಿದ್ದಾರೆ.

ಮದ್ದೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿಂದು ಮಾತನಾಡಿದ ಅವರು, ನಾನು ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲೇ ಜೆಡಿಎಸ್ ಭದ್ರಕೋಟೆಯ ಗೋಡೆ ಒಡೆದೋಗಿದೆ. ಕೆ.ಆರ್. ಪೇಟೆ ಬೈ ಎಲೆಕ್ಸನ್ ನಲ್ಲೂ ಜೆಡಿಎಸ್​ನವರು ಸೋತಿದ್ದಾರೆ. ಈಗ ಮತ್ತೆ ಈ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆಯನ್ನು ಛಿದ್ರ ಮಾಡುವ ಟೈಮ್ ಬಂದಿದೆ. ಆದ್ರೆ ನಾವೆಲ್ಲರೂ ಮನಸ್ಸು ಮಾಡಬೇಕು ಅಷ್ಟೇ ಎಂದು ಹೇಳಿದರು.

ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಬಾವುಟ ಹಾರಿಸಬೇಕು- ಸುಮಲತಾ.. ಎಲ್ಲರೂ ಸದುದ್ದೇಶ ಇಟ್ಟುಕೊಂಡು ಕೆಲಸ ಮಾಡಿದ್ರೆ ಖಂಡಿತ ಜಯ ಸಿಗುತ್ತೆ. ಇದನ್ನು ನಾನು ನನ್ನ ಚುನಾವಣೆಯಲ್ಲಿ ಕಲಿತಿದ್ದೇನೆ. ನನ್ನ ಆಸೆ ಏನು ಅಂದ್ರೆ? ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಏನು ಅಂತ ತೋರಿಸಬೇಕು. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಬಾವುಟ ಹಾರಿಸಬೇಕು. ಮುಖ್ಯವಾಗಿ ನಮ್ಮ ಸ್ವಂತ ಊರು ಮದ್ದೂರು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಬೇಕು. ಆ ಶಕ್ತಿ ನಮ್ಮಲ್ಲಿದೆ ಎಂದು ತಿಳಿಸಿದರು.

ಬಿಜೆಪಿ ಗೆಲ್ಲಿಸುವ ಆ ಶಕ್ತಿ ನಮ್ಮಲ್ಲಿದೆ. ಆ ಶಕ್ತಿ ನೋಡಿ ಸ್ಪೂರ್ತಿ ತಗೊಳ್ಳಬೇಕು. ಆ ಅವಕಾಶವನ್ನು ನಾವು ಮಿಸ್ ಮಾಡ್ಕೊಳ್ಳಬಾರದು.ಯಾವುದೇ ಕಾರಣಕ್ಕೂ ಬಿಟ್ಟುಕೊಡಬಾರದು. ಆ ನಿಟ್ಟಿನಲ್ಲಿ ಪ್ರಾಮಾಣಿಕದಿಂದ ಕೆಲಸ ಮಾಡಬೇಕು. ಈ ಸಂದರ್ಭದಲ್ಲಿ ಬಿಟ್ಟುಕೊಟ್ಟರೆ ನಮ್ಮದು ತಪ್ಪು ಹಾಗುತ್ತೆ. ಅದರಲ್ಲೂ ನನ್ನ ಸ್ವಂತ ಊರು ಮದ್ದೂರಿನಲ್ಲಿ ಬಿಜೆಪಿ ಬಾವುಟ ಆರಿಸುವುದೊಂದೆ ನನ್ನ ಆಸೆ ಎಂದು ಹೇಳುವ ಮೂಲಕ ಶಾಸಕ ಡಿ ಸಿ ತಮ್ಮಣ್ಣಗೆ ಟಾಂಗ್ ಕೊಟ್ಟಿದ್ದಾರೆ.

ಕಾಂಗ್ರೆಸ್ ಟಿಕೆಟ್ ಆಂಕಾಂಕ್ಷಿ ಪ್ರಸನ್ನ ಗೌಡ ಜೆಡಿಎಸ್​ಗೆ ಸೇರ್ಪಡೆ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಆಯಾ ಪಕ್ಷದ ಮುಖಂಡರು, ಟಿಕೆಟ್​ ಆಕಾಂಕ್ಷಿಗಳ ಪಕ್ಷಾಂತರ ಪರ್ವ ಆರಂಭವಾಗಿದೆ. ಇದರ ಬೆನ್ನಲ್ಲೇ ಬೊಂಬೆನಗರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಎಂದೇ ಬಿಂಬಿಸಲ್ಪಟ್ಟಿದ್ದ ಪ್ರಸನ್ನ ಪಿ ಗೌಡ ಅವರು ಜೆಡಿಎಸ್ ಸೇರುವುದಾಗಿ ಘೋಷಿಸಿದ್ದಾರೆ.

ಭಾನುವಾರ ಮೈಸೂರಿನಲ್ಲಿ ನಡೆದಿರುವ ಪಂಚರತ್ನ ಯಾತ್ರೆ ಸಮಾರೋಪಕ್ಕೂ‌ ಮುನ್ನ ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರ ಎದುರೇ ಪ್ರಸನ್ನ ಪಿ ಗೌಡ ಅವರು ಈ ಘೋಷಣೆ ಮಾಡಿದ್ದಾರೆ.

ಶನಿವಾರವಷ್ಟೇ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಣೆ ಆಗಿದ್ದು, ಅದರಲ್ಲಿ ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಆಗಿರಲಿಲ್ಲ. ಅದರ ಬೆನ್ನಲ್ಲೇ ಪ್ರಸನ್ನ ಪಿ ಗೌಡ ಅವರು ಜೆಡಿಎಸ್ ಸೇರಿದ್ದು, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರಿಗೆ ತವರು ಜಿಲ್ಲೆಯಲ್ಲೇ ಹಿನ್ನಡೆ ಆದಂತೆ ಆಗಿದೆ. ಮುಂದಿನ ದಿನಗಳಲ್ಲಿ ಬೊಂಬೆನಗರಿಯಲ್ಲಿ ರಾಜಕೀಯ ರಂಗು ಪಡೆದುಕೊಳ್ಳಲಿದೆ.

ಇದನ್ನೂಓದಿ:ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸಮಾಜ ಒಡೆಯುವ ಕೆಲಸ ಮಾಡ್ತಿದೆ: ಹೆಚ್ ಡಿ ಕುಮಾರಸ್ವಾಮಿ

Last Updated : Mar 26, 2023, 4:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.