ಮಂಡ್ಯ: ಕಾರು ಮತ್ತು ಆಟೋ ನಡುವೆ ಕಳೆದ ರಾತ್ರಿ ಸಂಭವಿಸಿದ ಮುಖಾಮುಖಿ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಈ ಘಟನೆ ಮಳವಳ್ಳಿಯ ಕಣಿಗಲ್ ಗೇಟ್ ಬಳಿ ನಡೆದಿದೆ. ಡಿಕ್ಕಿಯ ರಭಸಕ್ಕೆ ಆಟೋದಲ್ಲಿದ್ದವರು ದಾರುಣವಾಗಿ ಸಾವಿಗೀಡಾಗಿದ್ದಾರೆ.
ಮೃತರನ್ನು ಬೆಂಗಳೂರು ಮೂಲದ ರವಿಕುಮಾರ್ (50), ಭಾಸ್ಕರ (48), ಮದ್ದೂರಿನ ಶ್ರೀನಿವಾಸ್ (35) ಎಂದು ಗುರುತಿಸಲಾಗಿದೆ. ರವಿಕುಮಾರ್ ಜಯಕರ್ನಾಟಕ ಜನಪರ ವೇದಿಕೆ ರಾಜ್ಯ ಘಟಕದ ಕಾರ್ಯದರ್ಶಿಯಾಗಿದ್ದು, ಹುಟ್ಟೂರಿಗೆ ಭೇಟಿ ನೀಡಿ ವಾಪಸ್ ಬೆಂಗಳೂರಿಗೆ ತೆರಳುತ್ತಿದ್ದರು.
ಇದನ್ನೂ ಓದಿ: ಉಡುಪಿ: ಸಚಿವರ ಎಸ್ಕಾರ್ಟ್ ವಾಹನ ಪಲ್ಟಿ, ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ ಕೋಟ ಶ್ರೀನಿವಾಸ ಪೂಜಾರಿ
ಕಾರಿನಲ್ಲಿದ್ದ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ. ಗಾಯಾಳುಗಳಿಗೆ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.