ETV Bharat / state

ಮದ್ದೂರು ಸುತ್ತಮುತ್ತ ಮೂರು ಕಾಡಾನೆ ಪ್ರತ್ಯಕ್ಷ: ಆತಂಕದಲ್ಲಿ ಗ್ರಾಮಸ್ಥರು - ಮೂರು ಕಾಡಾನೆ ಪ್ರತ್ಯಕ್ಷ

ತಾಲೂಕಿನ ಅಗರಲಿಂಗನದೊಡ್ಡಿ, ಸೇಮರದ ದೊಡ್ಡಿ ವ್ಯಾಪ್ತಿಯಲ್ಲಿ 10 ಎಕರೆಗೂ ಹೆಚ್ಚು ಪ್ರದೇಶದಲ್ಲಿ ರೈತರು ಬೆಳೆದಿದ್ದ ಕಬ್ಬು, ರಾಗಿ, ಟೊಮೆಟೊ ಸೇರಿದಂತೆ ಇನ್ನಿತರ ಫಸಲುಗಳನ್ನು ಕಾಡಾನೆಗಳು ನಾಶ ಮಾಡಿವೆ.

Three elephants Found in Maddur
ಮೂರು ಕಾಡಾನೆ ಪ್ರತ್ಯಕ್ಷ
author img

By

Published : Jun 30, 2021, 10:18 AM IST

ಮಂಡ್ಯ: ಮದ್ದೂರು ತಾಲೂಕಿನ ಕೆ.ಕೋಡಿಹಳ್ಳಿ ಆಸುಪಾಸಿನ ಗ್ರಾಮಗಳಲ್ಲಿ ಮೂರು ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ರೈತರು ಬೆಳೆದಿದ್ದ ಕಬ್ಬು ಬೆಳೆ ಹಾನಿ ಮಾಡಿವೆ.

ಮದ್ದೂರು ಸುತ್ತಮುತ್ತ ಕಾಡಾನೆಗಳು ಪ್ರತ್ಯಕ್ಷ

ಮಳವಳ್ಳಿ ತಾಲೂಕಿನ ಮುತ್ತತ್ತಿ ಅರಣ್ಯ ಪ್ರದೇಶದಿಂದ ಆಹಾರ ಅರಸಿ ಬಂದಿರುವ ಸಲಗಗಳು, ಕಳೆದ ಮೂರು ದಿನಗಳ ಹಿಂದೆ ಹಲಗೂರು ಸಮೀಪದ ಹಾಡ್ಲಿ ಕೆರೆಯಲ್ಲಿ ಬೀಡುಬಿಟ್ಟಿದ್ದವು. ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಕಾಡಿಗಟ್ಟುವ ಪ್ರಯತ್ನ ನಡೆಸಿದರೂ ಫಲಕಾರಿಯಾಗಿರಲಿಲ್ಲ.

ನಂತರ ಶಿಂಷಾ ನದಿ ಮೂಲಕ ಸಾಗಿ ಬಂದು ಕೊಕ್ಕರೆ ಬೆಳ್ಳೂರಿನ ಹೊರವಲಯದಲ್ಲಿ ಪ್ರತ್ಯಕ್ಷವಾಗಿದ್ದವು. ಮದ್ದೂರು ಅರಣ್ಯ ಇಲಾಖೆಯ ತಂಡ ಕಾರ್ಯಾಚರಣೆ ನಡೆಸಿ ಆನೆಗಳನ್ನು ಕಾಡಿಗಟ್ಟುವ ಕಾರ್ಯಕೈಗೊಂಡಿದ್ದರು. ರಾತ್ರಿವೇಳೆಗೆ ನಾಪತ್ತೆಯಾಗಿದ್ದ ಆನೆಗಳು ಇಂದು ಮುಂಜಾನೆ ಸೋಮನಹಳ್ಳಿ ಕೆರೆ ಹಿಂಭಾಗದ ಕೆ.ಕೋಡಿಹಳ್ಳಿಯ ಕಬ್ಬಿನ ಗದ್ದೆಗೆ ನುಗ್ಗಿ ಕಬ್ಬಿನ ಬೆಳೆ ಹಾನಿ ಮಾಡಿವೆ.

ಸ್ಥಳದಲ್ಲಿ ಬೀಡುಬಿಟ್ಟಿರುವ ಅರಣ್ಯ ಇಲಾಖೆಯ ಆರ್‌ಎಫ್‌ಓ ನಾಗೇಂದ್ರ ಪ್ರಸಾದ್, ಎಸಿಎಫ್ ಶಶಿಧರ್, ಅಧಿಕಾರಿಗಳಾದ ರವಿ, ರತ್ನಾಕರ್ ಹಾಗೂ ಇಲಾಖೆಯ ಸಿಬ್ಬಂದಿ ಕಬ್ಬಿನ ಗದ್ದೆಯಿಂದ ಹೊರಬರದಂತೆ ಕಟ್ಟೆಚ್ಚರ ವಹಿಸಿದ್ದಾರೆ. ಸಂಜೆ ವೇಳೆಗೆ ಆನೆಗಳನ್ನು ಕಾಡಿಗೆ ಓಡಿಸಲಾಗುವುದು ಎಂದು ತಿಳಿಸಿದ್ದಾರೆ.

ತಾಲೂಕಿನ ಅಗರಲಿಂಗನದೊಡ್ಡಿ, ಸೇಮರದ ದೊಡ್ಡಿ ವ್ಯಾಪ್ತಿಯಲ್ಲಿ 10 ಎಕರೆಗೂ ಹೆಚ್ಚು ಪ್ರದೇಶದಲ್ಲಿ ರೈತರು ಬೆಳೆದಿದ್ದ ಕಬ್ಬು, ರಾಗಿ, ಟೊಮೆಟೊ ಸೇರಿದಂತೆ ಇನ್ನಿತರ ಫಸಲುಗಳನ್ನು ನಾಶ ಮಾಡಿವೆ.

ಇದನ್ನೂ ಓದಿ: ಸಕಲೇಶಪುರದಲ್ಲಿ ನಾಲ್ವರನ್ನು ಬಲಿ ಪಡೆದಿದ್ದ ಕಾಡಾನೆ ಮದ್ದೂರಲ್ಲಿ ಪ್ರತ್ಯಕ್ಷ : ಜನರ ಎದೆಯಲ್ಲಿ ಢವಢವ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.