ETV Bharat / state

ಸರ್ಕಾರದ ನೆರವಿನೊಂದಿಗೆ ಕೆರೆ ಹೂಳೆತ್ತಲು ಮುಂದಾದ ಗ್ರಾಮಸ್ಥರು

ಸಂಘ ಸಂಸ್ಥೆಗಳು ಹಾಗೂ ಸರ್ಕಾರದ ನೆರವಿನಿಂದ ಕೆರೆಗಳ ಹೂಳೆತ್ತಲು ಗ್ರಾಮಸ್ಥರು ಕೂಡಾ ಮುಂದಾಗಿದ್ದು, ಪೂಜೆ ಸಲ್ಲಿಸಿ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

author img

By

Published : Feb 18, 2020, 6:57 PM IST

The villagers ready to clean the lake with government assistance
ಸರ್ಕಾರದ ನೆರವಿನೊಂದಿಗೆ ಕೆರೆ ಹೂಳೆತ್ತಲು ಮುಂದಾದ ಗ್ರಾಮಸ್ಥರು; ಪೂಜೆ ಮೂಲಕ ಚಾಲನೆ!

ಮಂಡ್ಯ: ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಂತರ ಗ್ರಾಮಸ್ಥರು ಕೆರೆಗಳ ಕಾಯಕಲ್ಪಕ್ಕೆ ಮುಂದಾಗಿದ್ದಾರೆ.

ಸರ್ಕಾರದ ನೆರವಿನೊಂದಿಗೆ ಕೆರೆ ಹೂಳೆತ್ತಲು ಮುಂದಾದ ಗ್ರಾಮಸ್ಥರು; ಪೂಜೆ ಮೂಲಕ ಚಾಲನೆ

ಸಂಘ ಸಂಸ್ಥೆಗಳು ಹಾಗೂ ಸರ್ಕಾರದ ನೆರವಿನಿಂದ ಕೆರೆಗಳ ಹೂಳೆತ್ತಲು ಮುಂದಾಗಿದ್ದು, ಪೂಜೆ ಸಲ್ಲಿಸಿ ಚಾಲನೆ ನೀಡಿದ್ದಾರೆ. ಕೃಷ್ಣರಾಜಪೇಟೆ ತಾಲೂಕಿನ ಗಂಜಿಗೆರೆಕೊಪ್ಪಲು ಗ್ರಾಮದ ದೇವಿಕೆರೆಯ ಹೂಳೆತ್ತುವ ಕಾರ್ಯಕ್ಕೆ ತಹಶೀಲ್ದಾರ್ ಎಂ.ಶಿವಮೂರ್ತಿ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕ ಪಿ.ಗಂಗಾಧರ ರೈ ಜೊತೆ ಗ್ರಾಮಸ್ಥರು ಭೂಮಿಪೂಜೆ ನೆರವೇರಿಸಿದರು.

ನಮ್ಮೂರು ನಮ್ಮಕೆರೆ ಕಾರ್ಯಕ್ರಮದ ಅಡಿಯಲ್ಲಿ ಕೆರೆಗಳ ಹೂಳನ್ನು ತೆಗೆಸಿ ಜಲಸಾಕ್ಷರತೆಯ ಬಗ್ಗೆ ಗ್ರಾಮೀಣ ಜನರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಧರ್ಮಸ್ಥಳ ಸಂಸ್ಥೆಯು ಮಾಡುತ್ತಿದೆ. ಇನ್ನು ಜಿಲ್ಲಾ ಪಂಚಾಯತ್​ ಉಪಾಧ್ಯಕ್ಷೆ ಗಾಯತ್ರಿ, ತಾಲೂಕು ಪಂಚಾಯತ್​ ಅಧ್ಯಕ್ಷೆ ಜಯಲಕ್ಷ್ಮೀ, ಗಂಜಿಗೆರೆ ಗ್ರಾಪಂ ಅಧ್ಯಕ್ಷೆ ವೀರಾಜಮ್ಮ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾಗೇಗೌಡ, ಗ್ರಾಪಂ ಸದಸ್ಯ ರೇವಣ್ಣ, ರಮೇಶ್‌, ಧರ್ಮಸ್ಥಳ ಸಂಸ್ಥೆಯ ವಿಜಯಕುಮಾರ್ ಸುವರ್ಣ, ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ ಸೇರಿದಂತೆ ನೂರಾರು ಗ್ರಾಮಸ್ಥರು ಕೆರೆ ಹೂಳೆತ್ತುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.