ಮಂಡ್ಯ: ಕಲೆ – ಸಾಹಿತ್ಯ, ವಿಜ್ಞಾನ–ತಂತ್ರಜ್ಞಾನ, ನೃತ್ಯ–ನಾಟಕ, ಆಹಾರ–ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯ ಸಾಧನೆ ಮಾಡಿರುವ ಮಹಿಳೆಯರನ್ನು ನೆನೆಯುವ ಮೂಲಕ ಮಾರ್ಚ್ 8ರಂದು ವಿಶ್ವ ಮಹಿಳಾ ದಿನ ಆಚರಿಸಲಾಗುತ್ತೆ. ಈ ದಿನಕ್ಕೆ ಅರ್ಥ ಪೂರ್ಣವೆಂಬತೆ ಸಕ್ಕರೆ ನಾಡಿನ ಮಹಿಳೆಯರು ಮೈಲಿಗಲ್ಲಾಗಿದ್ದಾರೆ.
ಹೌದು... ಕಳೆದ ಮೂರು ದಶಕಗಳ ಹಿಂದೆ ಒಬ್ಬ ಮಗಳಾಗಿ, ಮಡದಿಯಾಗಿ, ತಾಯಿಯಾಗಿ, ಮನೆಗೆ ಆಳಾಗಿ ಕೇವಲ ಮನೆಗೆ ಮಾತ್ರ ಸೀಮಿತವಾಗಿದ್ದ ಮಹಿಳೆಯರು ಹಂತ ಹಂತವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ನಾವು ಪುರುಷರಿಗೇನು ಕಮ್ಮಿ ಇಲ್ಲ, ನಮ್ಮಲ್ಲೂ ಸಾಧನೆ ಮಾಡುವ ಆತ್ಮಸೈರ್ಯವಿದೆ ಎಂದು ತೊರಿಸಿಕೊಡುವ ಮೂಲಕ ನಮ್ಮಿದಂಲೂ ದೇಶ ಕಟ್ಟಲು ಸಾಧ್ಯ ಎಂದು ಹೇಳಿದ್ದಾರೆ.
ಇಂದು ವಿಶ್ವ ಮಹಿಳಾ ದಿನಾಚರಣೆ. ಇದಕ್ಕೆ ಅರ್ಥ ಕಲ್ಪಿಸುವಂತೆ ಸಕ್ಕರೆ ನಾಡು ಮಂಡ್ಯ ಜಿಲ್ಲೆಯನ್ನು ಮಹಿಳೆಯರೇ ಬಹುತೇಕ ಲೀಡ್ ಮಾಡುವ ಮೂಲಕ ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಕಾರ್ಯನಿರ್ವಹಿಸುತ್ತಿದ್ದಾರೆ.
ಸದ್ಯ ಜಿಲ್ಲೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಸೇರಿದಂತೆ ಮಹಿಳೆಯರ ಪರ್ವ ಆರಂಭವಾಗಿದೆ. ಜಿಲ್ಲಾಧಿಕಾರಿ ಅಶ್ವಥಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶ್ವಿನಿ, ಎಡಿಸಿ ಶೈಲಜಾ, ಶ್ರೀರಂಗಪಟ್ಟಣ ತಹಶಿಲ್ದಾರ್ ರೂಪ, ಭೂ ಮತ್ತು ಗಣಿ ಇಲಾಖೆ ಪುಷ್ಪ, ಜಿ.ಪಂ.ಅಧ್ಯಕ್ಷೆ ನಾಗರತ್ನಸ್ವಾಮಿ, ಉಪಾಧ್ಯಕ್ಷೆ ಗಾಯಿತ್ರಿ ಸೇರಿದಂತೆ ಬಹುತೇಕ ಇಲಾಖೆ ಮುಖ್ಯಸ್ಥರು ಹಾಗೂ ಸಿಬ್ಬಂದಿ ಮಹಿಳೆಯರೇ ಆಗಿದ್ದಾರೆ.
ಜಿಲ್ಲೆಯಲ್ಲಿ ಪ್ರಮುಖ ಹುದ್ದೆಗಳಲ್ಲಿ ಅತೀ ಹೆಚ್ಚು ಮಹಿಳೆಯರು ಇರುವುದು ಇದೇ ಮೊದಲ ಬಾರಿಗೆ ಎನ್ನಲಾಗುತ್ತಿದ್ದು, ಮಹಿಳಾಶಕ್ತಿಯಿಂದ ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಇದು ಒಳ್ಳೆಯ ಸಮಯವಾಗಿದೆ.
ಓದಿ: ಸಿಡಿ ಪ್ರಕರಣ: ದಿನೇಶ್ ಕಲ್ಲಹಳ್ಳಿ, ಡಿಕೆಶಿ, ಲಕ್ಷ್ಮಿ ಹೆಬ್ಬಾಳ್ಕರ್, ಹೆಚ್ಡಿಕೆ ವಿರುದ್ಧ ದೂರು ದಾಖಲು
ಒಟ್ಟಾರೆ, ಸಕ್ಕರೆ ನಾಡು ಮಂಡ್ಯ ಜಿಲ್ಲೆಯನ್ನು ಸದ್ಯ ಲೀಡ್ ಮಾಡುತ್ತಿರುವುದು ಮಹಿಳೆಯರೇ ಆಗಿದ್ದಾರೆ. ಈ ವರ್ಷದ ಮಹಿಳಾ ದಿನಾಚರಣೆಗೆ ಜಿಲ್ಲೆಯ ಮಹಿಳೆಯರಿಗೆ ಇದೊಂದು ಗಿಫ್ಟ್ ಎಂಬಂತೆ ಆಗಿದೆ. ಈ ಮಹಿಳೆಯರ ಸಾಧನೆ ಎಲ್ಲಾ ಮಹಿಳೆಯರಿಗೆ ಸ್ಫೂರ್ತಿಯಾಗಿ ಸಾಧನೆಯ ಶಿಖರವನ್ನೇರಬೇಕು ಎಂಬುದೇ ನಮ್ಮ ಆಶಯ.