ಮಂಡ್ಯ: ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಕರ್ಫ್ಯೂಗೆ ಜಿಲ್ಲೆಯ ವರ್ತಕರು, ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿ ಅಂಗಡಿಗಳನ್ನು ಬಂದ್ ಮಾಡಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅವಶ್ಯಕ ವಸ್ತು ಸಾಗಾಣಿಕೆ ವಾಹನಗಳನ್ನು ಹೊರತುಪಡಿಸಿ ಇತರೆ ವಾಹನಗಳ ಸಂಚಾರ ಬಂದ್ ಆಗಿದೆ.
ಎಲ್ಲಾ ಅಂಗಡಿಗಳ ಮಾಲೀಕರು ಸರ್ಕಾರದ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸಿದ್ದು, ನಗರದ ವಿವಿ ರಸ್ತೆ, ಪೇಟೆ ಬೀದಿ, ಅಂಬೇಡ್ಕರ್ ರಸ್ತೆ, ವಿನೋಬಾ ರಸ್ತೆ, ಕೆ.ಆರ್ ರಸ್ತೆಯಲ್ಲಿರುವ ಅಂಗಡಿಗಳು ಬಂದ್ ಆಗಿವೆ. ಔಷಧ ಅಂಗಡಿಗಳು ಮಾತ್ರ ತೆರೆದಿವೆ. ಇನ್ನೂ ಅವಶ್ಯಕ ವಸ್ತುಗಳ ಖರೀದಿಗೆಂದು ಕೆಲವರು ದ್ವಿಚಕ್ರ ವಾಹನ ಸವಾರರು ಅನವಶ್ಯಕವಾಗಿ ಸಂಚಾರ ಮಾಡುತ್ತಿದ್ದದ್ದು ಕಂಡು ಬಂದಿತು.